ತೀರ್ಥಹಳ್ಳಿಯಲ್ಲಿ ನಮ್ಮ ನಿರೀಕ್ಷೆಗಿಂತಲೂ ಹೆಚ್ಚಾಗಿ ಕೊರೋನಾ ವೈರಸ್ ಹರಡುತ್ತಿದೆ. ಇನ್ನೂ ಹೀಗೇ ಮುಂದುವರಿದರೆ ಆಕ್ಸಿಜನ್ ಕೊರತೆ ಭೀತಿ ಇದೆ, ಹಾಗಾಗಿ ಶಿಕಾರಿಪುರ, ಸಾಗರದಲ್ಲಿ ಮಾಡಿದಂತೆ ನಮ್ಮ ತಾಲ್ಲೂಕಿನಲ್ಲೂ ಆದಷ್ಟು ಬೇಗನೇ ಒಂದು ಆಕ್ಸಿಜನ್ ಪ್ಲಾಂಟ್ ನಿರ್ಮಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಸ್.ಈಶ್ವರಪ್ಪ ಅವರಲ್ಲಿ ಮನವಿ ಮಾಡಿಕೊಂಡರು.
ಕಳೆದ ಬಾರಿ ಕೊರೋನಾ ಭೀತಿ ಕಾಡಿದಾಗಲೂ ಬೆಂಗಳೂರು, ಮುಂಬೈ ನಲ್ಲಿ ವಾಸಿಸುತ್ತಿರುವ ಇಲ್ಲಿನ ಜನ ಊರಿಗೆ ವಾಪಾಸು ಬಂದರು ಅದೇ ಕಾರಣಕ್ಕೆ ಹೆಚ್ಚು ಕೇಸುಗಳು ಹಬ್ಬಲು ಕಾಣವಾಗಿತ್ತು, ಈ ಬಾರಿಯೂ ಅದೇ ಮರುಕಳಿಸುತ್ತಿದೆ. ಬೆಂಗಳೂರಿನಲ್ಲಿ ಬೆಡ್ ಕೊರತೆಯ ಭಯದಿಂದ ಹೆಚ್ಚಿನ ಜನ ಊರಿಗೆ ಬಂದು ಟೆಸ್ಟ್ ಮಾಡಿಸುತ್ತಿದ್ದು ಪಾಸಿಟಿವ್ ಬಂದು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಹಾಗಾಗಿ ತಾಲ್ಲೂಕಿನಲ್ಲಿ ಹೆಚ್ಚಿನ ವೈದ್ಯರು, ದಾದಿಯರು, ಸಹಾಯಕರು ಹಾಗೂ ಬೆಡ್ ವ್ಯವಸ್ಥೆ, ಆಂಬುಲೆನ್ಸ್, ಆಕ್ಸಿಜನ್ ವ್ಯವಸ್ಥೆ ಮಾಡಬೇಕಿದೆ.
ನಮ್ಮಲ್ಲಿನ ಬಹುದೊಡ್ಡ ಸಮಸ್ಯೆ ಎಂದರೆ ರೋಗದ ಗುಣ ಲಕ್ಷಣಗಳು ಇದ್ದರೂ ಸಹ ಪ್ರಾಥಮಿಕ ಹಂತದಲ್ಲಿ ಬಂದು ಟೆಸ್ಟ್ ಮಾಡಿಸಿಕೊಂಡು ಚಿಕಿತ್ಸೆ ಪಡೆಯುತ್ತಿಲ್ಲ ಕೊನೆಯ ಹಂತದಲ್ಲಿ ಬಂದು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ನೀವು ಅಜಾರೂಗತೆಯಿಂದ ಹಾಗೆ ಮಾಡಿದಲ್ಲಿ ಜೀವ ಉಳಿಸಿಕೊಳ್ಳುವುದು ಕಷ್ಟವಾಗುತ್ತದೆ.
ರೋಗದ ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ಆಸ್ಪತ್ರೆಗೆ ಬಂದು ಟೆಸ್ಟ್ ಮಾಡಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಅಂಥವರನ್ನು ಗುರುತಿಸಿ ಪೊಲೀಸರ ಮೂಲಕ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರು. ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ. ಜಿಲ್ಲಾಧಿಕಾರಿಗಳು, ಹಾಗೂ ಡಿಎಚ್ ಓ ಇದ್ದರು.



0 Comments