ರಂಗೇನಹಳ್ಳಿ ; ಸ್ಪೂರ್ತಿ ಸೇವಾ ಸಂಸ್ಥೆ ಲಕ್ಕವಳ್ಳಿ ಇವರ ವತಿಯಿಂದ ನಡೆದ ರಕ್ತದಾನ ಶಿಬಿರವು ಸಂಪೂರ್ಣ ಯಶ ಕಂಡಿದೆ.
ತರೀಕೆರೆ ತಾಲ್ಲೂಕು ಲಕ್ಕವಳ್ಳಿ ಹೋಬಳಿ ರಂಗೇನಹಳ್ಳಿಯ ಗಣಪತಿ ಪೆಂಡಾಲ್ ನಲ್ಲಿ ಜೀವದ ಗೆಳೆಯರ ಬಳಗ, ರೆಡ್ ಕ್ರಾಸ್ ಸಂಜೀವಿನಿ ಬ್ಲಡ್ ಕ್ಯಾಂಪ್, ಪ್ರಾಥಮಿಕ ಆರೋಗ್ಯ ಕೇಂದ್ರ ರಂಗೇನಹಳ್ಳಿ ಮತ್ತು ಲಯನ್ಸ್ ಅಂತಾರಾಷ್ಟ್ರೀಯ ಸಂಸ್ಥೆ ಬಿ ಆರ್ ಪ್ರಾಜೆಕ್ಟ್ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಶಿವಮೊಗ್ಗ ಇವರ ಸಹಯೋಗದೊಂದಿಗೆ ನಡೆದ ಈ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಊರಿನ ಅನೇಕ ಗ್ರಾಮಸ್ಥರು ಭಾಗವಹಿಸಿ ರಕ್ತದಾನ ಮಾಡಿದರು.
ಈ ಶಿಬಿರದ ಮುಕ್ತಾಯದ ವೇಳೆ ಒಟ್ಟು 50 ಮಂದಿ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದ್ದು ಐವರು ಮಹಿಳೆಯರೂ ಕೂಡ ಭಾಗವಹಿಸಿದ್ದು ವಿಶೇಷವಾಗಿತ್ತು. ಅಲ್ಲದೇ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರೆಡ್ ಕ್ರಾಸ್ ಸಂಸ್ತೆಯ ಪದಾಧಿಕಾರಿಗಳು, ಸಿಬ್ಬಂದಿವರ್ಗ, ಪ್ರಾಥಮಿಕ ಆರೋಗ್ಯ ಕೇಂದ್ರ ರಂಗೇನಹಳ್ಳಿ ಸಿಬ್ಬಂದಿಗಳು ಸ್ಪೂರ್ತಿ ಸೇವಾ ಸಂಸ್ಥೆಯ ವತಿಯಿಂದ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸ್ಪೂರ್ತಿ ಸೇವಾಸಂಸ್ಥೆಯ ಅಧ್ಯಕ್ಷ ನರೇಂದ್ರ ಕುಮಾರ್ ಜೈನ್, ಕಾರ್ಯದರ್ಶಿ ಸತ್ಯನಾರಾಯಣ, ಪಣಿರಾಜ್, ನಾಗರಾಜ್, ಲೋಕೇಶ್, ಭರತ್ ಗೌಡ ಲಯನ್ಸ್ ಕ್ಲಬ್ B. R. ಪ್ರಾಜೆಕ್ಟ್ ಸದಸ್ಯ ಸ್ವರೂಪ್ ಜೈನ್ , ತಮ್ಮಣ್ಣ ಸೇರಿದಂತೆ ಹಲವರು ಉಪಸ್ಥಿತಿ ಇದ್ದರು.


0 Comments