ಶೃಂಗೇರಿ: ಇಂದು ನಡೆಯಬೇಕಿದ್ದ ಮಳೆಯ ದೇವರೆಂದೇ ಕರೆಯಲ್ಪಡುವ ಕಿಗ್ಗಾದ ಶ್ರೀ ಶಾಂತಾ ಸಮೇತ ಋಷ್ಯಶೃಂಗಸ್ವಾಮಿಯ ರಥಬೀದಿ ಉತ್ಸವ (ರಥ ಎಳೆಯುವುದು) ಕೋವಿಡ್ ನಿಯಮದ ಕಾರಣದಿಂದ ಸ್ಥಗಿತಗೊಂಡಿದೆ. 

ರಥೋತ್ಸವದ ಅಂಗವಾಗಿ ರಥಬೀದಿಯನ್ನು ಅಲಂಕರಿಸಲಾಗಿತ್ತು. ರಥ ಸಾಗುವ ದಾರಿಯನ್ನು ಸ್ವಚ್ಚಗೊಳಿಸಿ ಮನೆಗಳ ಎದುರು ರಂಗೋಲಿಯನ್ನೂ ಹಾಕಲಾಗಿತ್ತು. ಪ್ರತೀ ಬಾರಿ ರಥದ ಎದುರು ವಾದ್ಯಮೇಳ, ಛತ್ರಿ, ಚಾಮರದೊಂದಿಗೆ ಮುಖ್ಯ ರಸ್ತೆಯಲ್ಲಿ ನೂರು ಮೀಟರ್ ವರೆಗೆ ರಥವನ್ನು ಎಳೆಯಲಾಗುತ್ತಿತು. ಆದರೆ ಈಗ ಕೋವಿಡ್ ನಿಯಮದ ಕಾರಣವನ್ನು ಹೇಳಿ ದಿಢೀರ್ ರಥ ಎಳೆಯದಂತೆ ನಿರ್ಬಂದ ಹೇರಲಾಗಿದ್ದು, ಭಕ್ತರ ಅಸಮಾಧಾನಕ್ಕೂ ಕಾರಣವಾಗಿದೆ. ಇನ್ನುಳಿದಂತೆ ಎಲ್ಲಾ ಧಾರ್ಮಿಕ ವಿದಿ ವಿಧಾನ ಗಳು ನೆಡಯುತ್ತಿದ್ದು, ಹಣ್ಣುಕಾಯಿ, ಪ್ರಸಾದ ವಿನಿಯೋಗ ನಡೆಯುತ್ತಿದೆ.

ಕಳೆದ ಒಂದು ವಾರದಿಂದ ಎಲ್ಲಾ ಹೋಮ ಹವನಗಳು ವಿಧಿವಿದಾನದಂತೆ ನಡೆಯುತ್ತಿದ್ದು, ನಾಳೆ ಒಕಳಿಯೂ ಇದೆ, ರಥ ಎಳೆಯಲು ಸಾಕಷ್ಟು ಜನ ಸೇರುವ ಸಾಧ್ಯತೆ ಇದ್ದಿದ್ದರಿಂದ ಅದನ್ನು ಕೈಬಿಡಲಾಗಿದೆ ಇನ್ನುಳಿದಂತೆ ಎಲ್ಲವೂ ಪ್ರತೀ ವರ್ಷದಂತೆ ನಡೆಯಲಿದೆ ಎಂದು ತಿಳಿದುಬಂದಿದೆ.