ಶೃಂಗೇರಿ : ಭಿಕ್ಷೆ ಬೇಡುವ ನೆಪದಲ್ಲಿ ಬಂದು ಚಿನ್ನದ ತಾಳಿ ಸರ ಕದ್ದೊಯ್ದ ಘಟನೆ ಪಟ್ಟಣದ ಕೆರೆ ಆಂಜನೇಯ ದೇವಸ್ಥಾನದ ಬಳಿ ನಡೆದಿದೆ.
ಒಂಟಿ ವೃದ್ದೆ ಇದ್ದ ಮನೆಗೆ ಭಿಕ್ಷೆಯ ನೆಪದಲ್ಲಿ ಬಂದು, ಕಾಫಿ ಕೇಳಿ ಕುಡಿದಿದ್ದಾನೆ ಬಳಿಕ ವೃದ್ದೆಯ ಕತ್ತಿನಲ್ಲಿದ ಚಿನ್ನದ ತಾಳಿ ಸರ, ಕಿವಿಯ ಓಲೆ ಕಿತ್ತುಕೊಂಡು ಪರಾರಿಯಾಗಿದ್ದಾನೆ. ತೀವ್ರ ಹಲ್ಲೆಗೆ ಒಳಗಾದ ವೃದ್ದೆ ಯಶೋಧಾ ಕಾಮತ್ (70) ಅವರನ್ನು ಸ್ಥಳೀಯ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೋಲೀಸರು ಆರೋಪಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.


0 Comments