ಚಿಕ್ಕಮಗಳೂರು

ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಕಿಡಿಕಾರಿದ ಸಿಟಿ ರವಿ

ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ ರವಿ ಕಿಡಿಕಾರಿದ್ದಾರೆ.ಸರ್ಕಾರ ತೆಗೆದುಕೊಳ್ಳುವ ನಿರ್ಣಯಗಳನ್ನು ವಿರೋಧ ಮಾಡುವುದೇ ಇವರ ಕೆಲಸ.ರೈತ ಕಾಯ್ದೆಯನ್ನು ವಿರೋಧಿಸಿ ರೈತ ನಾಯಕ ಎನಿಸಿಕೊಂಡಿದ್ದವರು ಈಗ ಕಾರ್ಮಿಕ ನಾಯಕರಾಗಿಬಿಟ್ಟಗದ್ದಾರೆ. ನೌಕರರು ಸ್ವಲ್ಪ ಕಾಯುವುದು ಸರಿ ಎನಿಸುತ್ತಿದೆ. ಕೊರೋನಾ ಹೆಚ್ಚುತ್ತಿರುವುದರಿಂದ ಹೊಡೆತ ಬಿದ್ದು ಆದಾಯ ಕಡಿಮೆಯಾಗಿದೆ. ಸಚಿವರು ಈಗ ನೌಕರರ ಜತೆ ಚರ್ಚಿಸಿದ್ದಾರೆ ಎಂದು ಹೇಳಿದರು 


ಶಿವಮೊಗ್ಗ

ನಕಲು ಮಾಡಲು ಅವಕಾಶ ಸಿಗಲಿಲ್ಲ; ಪರೀಕ್ಷೆಯನ್ನೇ ಬರೆಯದ ವಿದ್ಯಾರ್ಥಿಗಳು

ಶಿವಮೊಗ್ಗದ ಸುಬ್ಬಯ್ಯ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಕಾಪಿ ಹೊಡೆಯಲು ಅವಕಾಶ ನೀಡಿಲ್ಲ ಎಂದು ಪರೀಕ್ಷೆಯನ್ನೇ ಬಹಿಷ್ಕರಿಸಿದ ಘಟನೆ ನಡೆದಿದೆ.

"ನಾವು ಪ್ರವೇಶ ಪಡೆಯುವಾಗ 1.80 ಲಕ್ಷ ಪಡೆದು, ಈಗ ಕಾಪಿ ಹೊಡೆಯಲು ಅವಕಾಶ ನೀಡುತ್ತಿಲ್ಲ ಎಂದು ಪಶ್ಚಿಮ ಬಂಗಾಳದ ವಿದ್ಯಾರ್ಥಿಗಳು ದೂರಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಕಾಲೇಜಿನ ಪ್ರಾಚಾರ್ಯರಾದ ವನಮಾಲಾ ಸತೀಶ್" ಈ ವಿದ್ಯಾರ್ಥಿಗಳ ಹಾಲ್ ಟಿಕೆಟ್ ಬರುವುದು ತಡವಾದ್ದರಿಂದ ಒಂದು ಪರೀಕ್ಷೆಗೆ ಅರ್ಧ ಗಂಟೆ ತಡವಾಗಿ ಬಂದಿದ್ದಾರೆ. ನಾವು ಕಾಲೇಜಿನ ಫೀಸನ್ನು ಹೊರತುಪಡಿಸಿ ಹೆಚ್ಚಿನ ಮೊತ್ತವನ್ನು ಯಾವ ವಿದ್ಯಾರ್ಥಿಗಳಿಂದಲೂ ಪಡೆಯಲಿಲ್ಲ. ನಮ್ಮ ಕಾಲೇಜಿನಲ್ಲಿ ನಕಲಿ ಮಾಡಲು ಯಾವುದೇ ರೀತಿಯಲ್ಲಿ ಅವಕಾಶವನ್ನೂ ನೀಡುವುದಿಲ್ಲ" ಎಂದಿದ್ದಾರೆ


ಉತ್ತರ ಕನ್ನಡ

ತಡರಾತ್ರಿ ಅನಂತ್ ಕುಮಾರ್ ಹೆಗ್ಡೆಗೆ ಬೆದರಿಕೆ ಕರೆ

ಸಂಸದ ಅನಂತ್ ಕುಮಾರ್ ಹೆಗ್ಡೆ ಅವರಿಗೆ ತಡರಾತ್ರಿ ಸುಮಾರು 2 ಗಂಟೆಗೆ ಬೆದರಿಕೆ ಕರೆಯೊಂದು ಬಂದಿದೆ ಎಂದು ಸಂಸದರ ಆಪ್ತ ಕಾರ್ಯದರ್ಶಿ ಸುರೇಶ್ ಶೆಟ್ಟಿ ದೂರು ದಾಖಲಿಸಿದ್ದಾರೆ. ತಡರಾತ್ರಿ ಬಂದ ಕರೆಯನ್ನು ಅನಂತ ಕುಮಾರ್ ಹೆಗ್ಡೆ ಅವರೇ ಸ್ವೀಕರಿಸಿದ್ದಾರೆ. ಕರೆ ಮಾಡಿದ ವ್ಯಕ್ತಿ ಉರ್ದು ಮಿಶ್ರಿತ ಭಾಷೆಯಲ್ಲಿ ಮಾತನಾಡಿದ್ದಾನೆ, ಅಲ್ಲದೇ ಜೀವಬೆದರಿಕೆ ಒಡ್ಡಿದ್ದಾನೆ. ಹೊಸಮಾರುಕಟ್ಟೆಯ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಲಾಗಿದೆ.


ಕೊಡಗು

ಬಾಲಕಿ ಮೇಲೆ ನಿರಂತರ ಅತ್ಯಾಚಾರ; ಆರೋಪಿಯ ಬಂಧನ

ಶನಿವಾರಪೇಟೆ : ಸಿದ್ದಾಪುರ ಗ್ರಾಮದಲ್ಲಿರುವ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪಿಯ ಬಂಧನವಾಗಿದೆ.


ಲೋಹಿತ್ ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಬಾಲಕಿಯ ತಾಯಿಯು ಕೂಲಿ ಕಾರ್ಮಿಕರಾಗಿದ್ದಾರೆ. ಕೂಲಿ ಕೆಲಸಕ್ಕೆ ಹೋದಾಗ ಮನೆಯಲ್ಲಿ ಬಾಲಕಿ ಒಬ್ಬಳೇ ಇರುತ್ತಿದ್ದಳು. 10 ನೇ ತರಗತಿವರೆಗೆ ಬಾಲಕಿ ವ್ಯಾಸಂಗ ಮಾಡಿದ್ದಾಳೆ. ಆಕೆಯನ್ನು ಗಮನಿಸಿದ್ದ ಆಶಾ ಕಾರ್ಯಕರ್ತೆಯರು ದೂರು ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಈ ಬಗ್ಗೆ ತಾಯಿ ಮಗಳನ್ನು ವಿಚಾರಿಸಿದಾಗ 'ಲೋಹಿತ್ ನನ್ನನ್ನು ಒಂದು ವರ್ಷದಿಂದ ಪ್ರೀತಿಸುತ್ತಿದ್ದ. ನಾನು ಮನೆಯಲ್ಲಿ ಒಬ್ಬಳೇ ಇದ್ದಾಗ ಹಲವು ಬಾರಿ ಬಂದು ಅತ್ಯಾಚಾರ ಎಸಗಿದ್ದಾನೆ. ನಂತರ ಈ ರೀತಿ ಮೋಸ ಮಾಡಿದ್ದಾನೆ' ಎಂದು ಮಗಳು ಹೇಳೀದ್ದಾಳೆ.


ಹಾಸನ

ಜಿಲ್ಲೆಯಲ್ಲಿ ಆರ್ಭಟಿಸುತ್ತಿದೆ ಕೊರೋನ ಮಹಾಮಾರಿ

ಹಾಸನದಲ್ಲಿ ಕೊರೋನ ವ್ಯಾಪಕವಾಗಿ ಹರಡುತ್ತಿದೆ. ಜಿಲ್ಲಾ ಆರೋಗ್ಯ ಮತ್ತು ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಕೆ ಎಂ ಸತೀಶ್ ಅವರು ಮಾಹಿತಿ ನೀಡಿ ಮಂಗಳವಾರ ಜಿಲ್ಲೆಯಲ್ಲಿ ಒಟ್ಟು 

ಸೋಂಕಿತರ ಸಂಖ್ಯೆ 106 ಕ್ಕೆ ಏರಿಕೆಯಾಗಿದೆ,716 ಒಟ್ಟು ಸಕ್ರಿಯ ಪ್ರಕರಣಗಳಿದ್ದಾವೆ. ಹಾಸನ ತಾಲ್ಲೂಕಿನಲ್ಲೇ 37 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ ಎಂದರು.


ಶವವನ್ನು ಬೀದಿಗೆ ಎಸೆದಿದ್ದವರ ಬಂಧನ

ಖಾಸಗಿ ಫೈನಾನ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಮಂಜುನಾಥ್ ಆತ್ಮಹತ್ಯೆಗೆ ಶರಣಾಗಿದ್ದರು. ಅವರ ಶವವನ್ನು ಬೀದಿಯಲ್ಲಿ ಎಸೆದಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಮಂಗಳಾ ಅವರ ಪುತ್ರ ಮಂಜುನಾಥ್, ಆಕೆಯ ಸ್ನೇಹಿತ ರಾಘವೇಂದ್ರ ಬಂಧಿತರು. ಖಾಸಗಿ ಸಂಸ್ಥೆಯಲ್ಲಿ ಫೈನಾನ್ಸ್ ಕೆಲಸ ಮಾಡಿಕೊಂಡಿದ್ದ ಮಂಜುನಾಥ್ ಕೊರೋನಾ ಸಮಯದಲ್ಲಿ ಕೆಲಸ ಕಳೆದುಕೊಂಡಿದ್ದರು. ಮಂಗಳಾ ಮಂಜುನಾಥ್ ಪ್ರೇಯಸಿ. ಒಂದು ದಿನ ಮಂಜುನಾಥ್ ಮಂಗಳಾ ಜತೆ ಜಗಳವಾಡಿಕೊಂಡು ವಿಷ ಸೇವಿಸಿದ್ದಾನೆ.ವಿಷ ಕುಡಿದ ಮಂಜುನಾಥ್ ರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆ. ಶವವನ್ನು ದಾರಿ ಮಧ್ಯೆಯೇ ಎಸೆದು ಹೋಗಿದ್ದಾರೆ. ಈಗ ಈ ಮೂವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.