ಮಡಿಕೇರಿ; ಗುಂಡು ಹಾರಿಸಿ, ಕುತ್ತಿಗೆ ಸೀಳಿ ಅಮಾನುಷವಾಗಿ ಗೋವುಗಳ ಹತ್ಯೆ ಮಾಡಿರುವ ಘಟನೆ ಮಡಿಕೇರಿಯ ಗೋಣಿಕೊಪ್ಪದಲ್ಲಿ ನಡೆದಿದೆ.
ಒಟ್ಟು ಸುಮಾರು ಮೂರು ಹಸುಗಳನ್ನು ಗುಂಡಿಕ್ಕಿ ಅಮಾನುಷವಾಗಿ ಕೊಂದು ಹಾಕಿರುವುದು ಗೋಣಿಕೊಪ್ಪ ವ್ಯಾಪ್ತಿಯ ಹೆಬ್ಬಾಲೆ ದೇವರಪುರ ಎಸ್ಟೇಟ್ ಒಂದರಲ್ಲಿ ನಡೆದಿದೆ.
ಒಟ್ಟು ಹಸುಗಳ ಮೌಲ್ಯ ಸುಮಾರು 50 ಸಾವಿರಕ್ಕೂ ಅಧಿಕ ಎಂದು ಅಂದಾಜಿಸಲಾಗಿದೆ.
ಒಟ್ಟು ಮೂರು ಹಸುಗಳ ಮೃತದೇಹ ಸಿಕ್ಕಿದ್ದು, ಗುಂಡು ಹಾರಿಸಿ, ಕುತ್ತಿಗೆಯನ್ನು ಕತ್ತರಿಸಲಾಗಿದೆ. ಮಾಂಸಕ್ಕಾಗಿ ಈ ಕೃತ್ಯ ನಡೆಸಲಾಗಿದೆ ಎಂಬ ಸಂಶಯ ವ್ಯಕ್ತವಾಗಿದೆ.
ಗೋವುಗಳನ್ನು ಹತ್ಯೆ ಮಾಡಿದವರು ಮೃತ ಗೋವುಗಳನ್ನು ಅಲ್ಲೇ ಬಿಟ್ಟು ಹೋಗಿದ್ದಾರೆ. ಈ ಹಸುಗಳು ರಮೇಶ್, ಸಾಬು ಗಣಪತಿ ಮತ್ತು ಚುಬರ ಎಂಬುವವರಿಗೆ ಸೇರಿದ್ದು. ಹಸುವಿನ ಕುತ್ತಿಗೆಯನ್ನೂ ಸೀಳಿದ್ದು ಅದನ್ನು ಹಲಾಲ್ ಮಾಡಿದ್ದು ಸಾಗಿಸಲು ಸಾಧ್ಯವಾಗದೇ ಅಲ್ಲಿಂದ ಬಿಟ್ಟು ಪರಾರಿಯಾಗಿದ್ದಾರೆ ಎಂದು ಹಸುವಿನ ಮಾಲೀಕರಾದ ಸಾಬು ಗಣಪತಿ ಅವರು ಆರೋಪಿಸಿದ್ದಾರೆ.
ಹಸುಗಳ ಹತ್ಯೆಗೆ ಸ್ಥಳೀಯರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು ದುಷ್ಕರ್ಮಿಗಳ ಪತ್ತೆಗೆ ಒತ್ತಾಯಿಸಿ ಗ್ರಾಮಸ್ಥರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


0 Comments