ರಾಜ್ಯಾದ್ಯಂತ ಇಂದಿನಿಂದ 14 ದಿನಗಳ ಸಂಪೂರ್ಣ ಲಾಕ್ಡೌನ್ ಹೇರಿದ್ದು ಈ ಹಿಂದಿನ ವೀಕೆಂಡ್ ಲಾಕ್ಡೌನ್ ಪರಿಣಾಮ ಕೊರೋನಾ ಕೇಸ್ ಗಳ ಸಂಖ್ಯೆಯಲ್ಲಿ ಇಳಿಮುಖ ಕಂಡಿದೆ.
ನೆನ್ನೆ ದಾಖಲೆಯ 403 ಪಾಸಿಟಿವ್ ಕೇಸುಗಳು ಜಿಲ್ಲೆಯಲ್ಲಿ ದಾಖಲಾಗಿದ್ದವು. ಇಂದು ಜಿಲ್ಲೆಯಲ್ಲಿ ಒಟ್ಟು 275 ಕೇಸ್ ಗಳು ಪತ್ತೆಯಾಗಿದ್ದು, 89 ಮಂದಿ ಗುಣಮುಖರಾಗಿ ಕೊರೋನಾ ಗೆದ್ದಿದ್ದಾರೆ.
ಜಿಲ್ಲೆಯಲ್ಲಿ ಇಂದು ಯಾವುದೇ ಸಾವು ಸಂಭವಿಸಿಲ್ಲ.
ತಾಲ್ಲೂಕುವಾರು ನೋಡಿದಾಗ
- ಚಿಕ್ಕಮಗಳೂರು 104
- ಶೃಂಗೇರಿ 18
- ಮೂಡಿಗೆರೆ 42
- ಕೊಪ್ಪ 08
- ಎನ್ ಆರ್ ಪುರ 08
- ತರೀಕೆರೆ 30
- ಕಡೂರು 65
ಹೀಗೆ ಒಟ್ಟು 275 ಪ್ರಕರಣಗಳು ದಾಖಲಾಗಿವೆ.
ಸಾರ್ವಜನಿಕರು ಮಾಸ್ಕ್ ಧರಿಸಿ, ಅಂತರ ಕಾಪಾಡಿಕೊಂಡು ಸರ್ಕಾರದ ನಿಯಮ ಪಾಲಿಸುವ ಮೂಲಕ ಕೊರೋನಾ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಬೇಕಿದೆ.
ಭಯ ಬೇಡ ಎಚ್ಚರಿಕೆ ಇರಲಿ



0 Comments