ಶೃಂಗೇರಿ ;ಶೃಂಗೇರಿ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರ 71ನೇ ವರ್ಧಂತಿ ಉತ್ಸವದ ಪ್ರಯುಕ್ತ ಶ್ರೀ ಶಾರದಾ ಪೀಠ ಶೃಂಗೇರಿಯಲ್ಲಿ ಏಪ್ರಿಲ್ 13 ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.
ಈ ವರ್ಧಂತಿ ಉತ್ಸವದ ಪ್ರಯುಕ್ತ ಭಾನುವಾರ ಸಂಜೆ ಶೃಂಗೇರಿಯ ಸಾರ್ವಜನಿಕರು ಶ್ರೀಮಠಕ್ಕೆ ಹೊರೆಕಾಣಿಕೆ ಸಲ್ಲಿಸಿದರು. ಮಾಸ್ಕ್ ಧರಿಸಿ ಸುರಕ್ಷತಾ ಕ್ರಮಗಳೊಂದಿಗೆ ಶೃಂಗೇರಿಯ ಶ್ರೀಶಂಕರಾಚಾರ್ಯ ವೃತ್ತಕ್ಕೆ ಸಾರ್ವಜನಿಕರು ವಾಹನಗಳಲ್ಲಿ ತಮ್ಮ ಹೊರೆಕಾಣಿಕೆಯನ್ನು ತಂದಿದ್ದರು.5:00 ಗಂಟೆಗೆ ಶಂಕರಾಚಾರ್ಯ ವೃತ್ತದಿಂದ ಹೊರೆಕಾಣಿಕೆ ಸಮರ್ಪಣಾ ಉತ್ಸವವು ಚಂಡೆಮೇಳ, ಕೀಲ್ಗೊಂಬೆ ಪ್ರದರ್ಶನದೊಂದಿಗೆ ಹೊರಟಿತು.
ಶೃಂಗೇರಿಯ ರಥಬೀದಿಯಲ್ಲಿ ಹೊರೆಕಾಣಿಕೆ ಸಮರ್ಪಣಾ ಉತ್ಸವವು ಸಾಗಿ ಶ್ರೀಮಠವನ್ನು ಸೇರಿತು. ತದನಂತರ ಜಗದ್ಗುರು ಶ್ರೀವಿಧುಶೇಖರ ಭಾರತೀಗಳವರ ಸಮ್ಮುಖದಲ್ಲಿ ಹೊರೆಕಾಣಿಕೆಯನ್ನು ಅರ್ಪಿಸಲಾಯಿತು. ಕಾರ್ಯಕ್ರಮಕ್ಕೆ ಬೇಕಾದ ಅಕ್ಕಿ, ಬಾಳೆಗೊನೆ, ತೆಂಗಿನಕಾಯಿ ಮುಂತಾದವುಗಳನ್ನು ಸಾರ್ವಜನಿಕರು ಸಮರ್ಪಣಾ ಭಾವದಿಂದ ಶ್ರೀಮಠಕ್ಕೆ ಅರ್ಪಿಸಿದರು. ಸುಮಾರು 50 ಕ್ಕೂ ಹೆಚ್ಚು ವಾಹನಗಳಲ್ಲಿ ಭಕ್ತಾದಿಗಳು ಹೊರೆಕಾಣಿಕೆಯನ್ನು ಸಲ್ಲಿಸಿದರು


0 Comments