ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಹನುಮನಹಳ್ಳಿ ಗ್ರಾಮದ ಗದ್ದೆಗಳಲ್ಲಿ ಕಾಡಾನೆಯೊಂದು ಓಡಾಡುತ್ತಿರುವುದು ಜನರಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದೆ.
ಕಳೆದ ಕೆಲವು ತಿಂಗಳಿನಿಂದ ಮೂಡಿಗೆರೆ ಸುತ್ತಮುತ್ತ ಹಲವೆಡೆ ಹಲವಾರು ಬಾರಿ ಕಾಡಾನೆಗಳು ಕಾಣಿಸಿಕೊಂಡಿದ್ದು ಜನರನ್ನು ಚಿಂತೆಗೀಡು ಮಾಡಿದೆ. ಹನುಮನಹಳ್ಳಿಯ ಸ್ಥಳೀಯರಾದ ಪ್ರೀತಮ್ ಎನ್ನುವವರ ಕಾಫಿ ತೋಟದಲ್ಲೂ ಇಂದು ಕಾಡಾನೆ ಓಡಾಡಿದ್ದು ಹೆಜ್ಜೆ ಗುರುತುಗಳು ಬಿದ್ದಿವೆ.
ಪದೇಪದೇ ಇಂತಹ ಘಟನೆಗಳು ಮರುಕಳಿಸುತ್ತಿಥುವುದರಿಂದ ಗ್ರಾಮಸ್ಥರು ಭಯ ಭೀತಿಯಿಂದ ಬದುಕುವಂತಾಗಿದ್ದು, ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡು ಕಾಡಾನೆಗಳ ಕಾಟಕ್ಕೆ ಬ್ರೇಕ್ ಹಾಕಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.



0 Comments