ಸಿಬಿಎಸ್ಇ ವಿದ್ಯಾರ್ಥಿಗಳಿಗೆ ನಡೆಯಬೇಕಿದ್ದ ಹತ್ತನೇ ತರಗತಿ ಪರೀಕ್ಷೆ ರದ್ದು ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮುಂದೂಡಿಕೆಯಾಗಿದೆ. ಹಾಗಾದರೆ ನಮ್ಮ ರಾಜ್ಯದ ಪರೀಕ್ಷೆಗಳು ರದ್ದಾಗಿವೆಯೇ? ಮುಂದೆ ಹೋಗಿದೆಯೇ? ಎನ್ನುವುದಕ್ಕೆ ರಾಜ್ಯ ಸರ್ಕಾರದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸ್ಪಷನೆ ನೀಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಎಸ್. ಸುರೇಶ್ ಕುಮಾರ್ " ಸಿಬಿಎಸ್ಇ ತೆಗೆದುಕೊಂಡಿರುವ ಪರೀಕ್ಷೆ ರದ್ದತಿ ಸಂಬಂಧ ರಾಜ್ಯದಲ್ಲಿ ಯಾವುದೇ ನಿರ್ಧಾರವನ್ನು ಇನ್ನೂ ಕೈಗೊಂಡಿಲ್ಲ." ಎಂದರು.

"ಸಿಬಿಎಸ್ ಇ ಪರೀಕ್ಷೆ ರದ್ದತಿಯಾಗುತ್ತಿದ್ದಂತೆ ರಾಜ್ಯದಲ್ಲಿ ಪರೀಕ್ಷೆಗಳು ರದ್ದಾಗಿವೆ ಎಂದು ಗೊಂದಲ ಹಲವರಿಗೆ ಉಂಟಾಗಿದೆ. ನಮ್ಮ ರಾಜ್ಯದಲ್ಲಿ ಹತ್ತನೇ ತರಗತಿ ಪರೀಕ್ಷೆಗಳು ಜೂನ್ 21 ರಿಂದ ನಡೆಯಬೇಕಿದೆ. ಸದ್ಯಕ್ಕೆ ರಾಜ್ಯಸರ್ಕಾರವು ಪರೀಕ್ಷೆ ರದ್ದು ಮಾಡುವಂಥ ಯಾವುದೇ ನಿರ್ಧಾರ ಮಾಡಿಲ್ಲ. ಅಗತ್ಯ ಬಿದ್ದಾಗ ಮುಂದೆ ಅವಲೋಕನ, ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಲಾಗುವುದು "ಎಂದು ಟ್ವೀಟ್ ಮಾಡಿದ್ದಾರೆ.

"ರಾಜ್ಯದಲ್ಲಿ ಇರುವ ಸಿಬಿಎಸ್ಸಿ ಶಾಲೆಗಳ 10ನೇ ತರಗತಿ ಪರೀಕ್ಷೆ ರದ್ದಾಗಿದ್ದು, ದ್ವಿತೀಯ ಪಿಯುಸಿ ಪರೀಕ್ಷೆ ಮುಂದೂಡಿಕೆ ಆಗಿದೆ.

ರಾಜ್ಯ ಶಿಕ್ಷಣ ಸಂಸ್ಥೆಗಳ ಪರೀಕ್ಷೆ ಮುಂದೂಡಲಾಗಿಲ್ಲ"