ಶೃಂಗೇರಿ ತಾಲೂಕಿನ ಹಾಲಂದೂರು ಗ್ರಾಮದ  ಸರ್ವೇ ನಂಬರ್ 332ರ ಸರ್ಕಾರಿ ಒತ್ತುವರಿ ಜಾಗವಾಗಿರುವ ಕಾಫಿ ತೋಟದಲ್ಲಿ ಸಿಲ್ವರ್ ಮರಗಳನ್ನು ಒಳಗೊಂಡಂತೆ ಅಕ್ರಮವಾಗಿ ಬೆಲೆಬಾಳುವ ನಂದಿ, ಹಲಸು, ಸಾಗುವಾನಿ, ಹೆಬ್ಬಲಸು ಇತ್ಯಾದಿ ಸುಮಾರು 140ಕ್ಕೂ ಅಧಿಕ ಮರಗಳನ್ನು ಕಡಿತ ಮಾಡಿರುತ್ತಾರೆ. ಈ ಜಾಗವು ಸೆಕ್ಷನ್ 4 ವ್ಯಾಪ್ತಿಗೆ ಸಹ ಒಳಪಡುತ್ತದೆ. ಈ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ಪ್ರಶ್ನಿಸಿದಾಗ ಉಡಾಫೆಯಿಂದ ಉತ್ತರಿಸಿರುತ್ತಾರೆ.

ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಒತ್ತುವರಿದಾರ ಬಾಲಕೃಷ್ಣ ಇವರು ಶಾಮೀಲಾಗಿ ಈ ಕೃತ್ಯ ನಡೆಸಿರುತ್ತಾರೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದ್ದು ಈ ಮರಗಳನ್ನು ಸರ್ಕಾರಿ ರಸ್ತೆಯ ಮೇಲೆ ಎಳೆದುಕೊಂಡು ಹೋಗಿ ರಸ್ತೆಯನ್ನು ಸಹ ಹಾಳುಗೆಡವಿರುತ್ತಾರೆ ಎಂದು ಸ್ಥಳೀಯರಾದ ಬಿ.ಆರ್. ಸುಬ್ರಹ್ಮಣ್ಯ ಭಟ್ ಅವರು ಆರೋಪ ಮಾಡಿದ್ದಾರೆ.

ಈ ಗಂಭೀರ ಆರೋಪ ಮಾಡಿರುವ ಬಿ.ಆರ್. ಸುಬ್ರಹ್ಮಣ್ಯ ಭಟ್ ಅವರು ತಮ್ಮ ಬಳಿ ಮರ ಕಡಿತದ ನಂತರದ ಅದರ ಕುರುಹುಗಳನ್ನು ತೋರಿಸುವ ಫೋಟೋಗಳು ಹಾಗೂ ವೀಡಿಯೋ ಸಹ ಇರುವುದಾಗಿಯೂ ತಿಳಿಸಿರುತ್ತಾರೆ.