ತೀರ್ಥಹಳ್ಳಿ ; ಸೋಮವಾರ ತೀರ್ಥಹಳ್ಳಿಯ ಸೊಪ್ಪುಗುಡ್ಡೆಯಲ್ಲಿರುವ ಕಾಂಗ್ರೆಸ್ ಕಛೇರಿಗೆ ಭೇಟಿ ನೀಡಿದ್ದ ಕಾಂಗ್ರೆಸ್ ಮುಖಂಡರ ವಿರುದ್ಧ ಪಕ್ಷದ ಕಾರ್ಯಕರ್ತರು ಗರಂ ಆಗಿದ್ದಾರೆ.

ಕಿಮ್ಮನೆ ರತ್ನಾಕರ್ ಅವರ ಗಮನಕ್ಕೆ ತರದೇ ಆಯ್ಕೆ ಸಮಿತಿ ರಚಿಸಿ ಮಂಜುನಾಥ್ ಗೌಡ ಅವರಿಗೆ ಸ್ಥಾನ ನೀಡಲಾಗಿತ್ತು. ಇದರಿಂದ ಕಿಮ್ಮನೆ ರತ್ನಾಕರ್ ಅವರು ಅಸಮಾಧಾನ ಹೊಂದಿದ್ದರು.

ಸೋಮವಾರ ಕಾಂಗ್ರೆಸ್ ಕಛೇರಿಗೆ ಭೇಟಿ ನೀಡಿದ್ದ ಶಿವಮೊಗ್ಗ ಜಿಲ್ಲಾ ವೀಕ್ಷಕ ಶಫಿ ಉಲ್ಲಾ ಅವರ ಎದುರಲ್ಲೇ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್ ಎಸ್ ಸುಂದರೇಶ್ ಅವರಿಗೆ  ಕಾರ್ಯಕರ್ತರು ಕ್ಲಾಸ್ ತೆಗೆದುಕೊಂಡರು. " ಪಕ್ಷದಲ್ಲಿ ಯಾವುದೇ ತೀರ್ಮಾನ ತೆಗೆದುಕೊಳ್ಳುವಾಗ ಕಿಮ್ಮನೆ ರತ್ನಾಕರ್ ಅವರ ಗಮನಕ್ಕೂ ಬರಬೇಕು. ಪಕ್ಷದಲ್ಲಿ ಅವರನ್ನು ಯಾವುದೇ ಕಾರಣಕ್ಕೂ ಕಡೆಗಣಿಸಬಾರದು. ಒಂದು ವೇಳೆ ಕಡೆಗಣಿಸಿದಲ್ಲಿ ಪರಿಣಾಮ ಸರಿಯಾಗಿರುವುದಿಲ್ಲ. ಕಿಮ್ಮನೆ ಗಮನಕ್ಕೆ ಬರದೇ ಇರುವ ಚಟುವಟಿಕೆಗಳ ಜಾರಿಗೊಳಿಸಲು ನಮ್ಮ ಕ್ಷೇತ್ರದಲ್ಲಿ ಬಿಡುವುದಿಲ್ಲ" ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.