ರಾಜ್ಯದಲ್ಲಿ ವೀಕೆಂಡ್ ಲಾಕ್ಡೌನ್ ಹೇರಿದ್ದು ಸೋಮವಾರದಿಂದ ಹಾಗೆಯೇ ಮುಂದುವರೆಯುವ ಸಾಧ್ಯತೆ ಸಹ ಇದೆ ಎಂದು ಹೇಳಲಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿಯೂ ಗುರುವಾರ ಸಂಜೆಯಿಂದಲೇ ಅಘೋಷಿತ ಲಾಕ್ಡೌನ್ ಹೇರಿದ್ದು ಕೊರೋನಾ ತಡೆಗೆ ಸರ್ವ ಪ್ರಯತ್ನ ಮಾಡಲಾಗುತ್ತಿದೆ.
ನೆನ್ನೆ 229 ಪಾಸಿಟಿವ್ ಕೇಸುಗಳು ದಾಖಲಾಗದ್ದವು. ಇಂದು ಜಿಲ್ಲೆಯಲ್ಲಿ ಒಟ್ಟು 185 ಕೇಸ್ ಗಳು ಪತ್ತೆಯಾಗಿದ್ದು, ಒಂದು ಸಾವು ಸಂಭವಿಸಿದೆ. ಕಡೂರು ಮೂಲದ ಖ್ಯಾತ ಕ್ರಿಕೆಟ್ ತಾರೆ ವೇದಾ ಕೃಷ್ಣಮೂರ್ತಿ ಅವರ ತಾಯಿ (ಚೆಲುವಾಂಬ, ವಯಸ್ಸು 68) ಸಹ ಕೊರೋನಾ ಗೆ ಬಲಿಯಾಗಿದ್ದಾರೆ.
ತಾಲ್ಲೂಕುವಾರು ನೋಡಿದಾಗ
- ಚಿಕ್ಕಮಗಳೂರು 58
- ಶೃಂಗೇರಿ 15
- ಮೂಡಿಗೆರೆ 27
- ಕೊಪ್ಪ 13
- ಎನ್ ಆರ್ ಪುರ 20
- ತರೀಕೆರೆ 25
- ಕಡೂರು 27
ಹೀಗೆ ಒಟ್ಟು ಪ್ರಕರಣಗಳು ದಾಖಲಾಗಿವೆ.
ಸಾರ್ವಜನಿಕರು ಮಾಸ್ಕ್ ಧರಿಸಿ, ಅಂತರ ಕಾಪಾಡಿಕೊಂಡು ಸರ್ಕಾರದ ನಿಯಮ ಪಾಲಿಸುವ ಮೂಲಕ ಕೊರೋನಾ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಬೇಕಿದೆ. ಭಯ ಬೇಡ ಎಚ್ಚರಿಕೆ ಇರಲಿ.




0 Comments