ಚಿಕ್ಕಮಗಳೂರು ಜಿಲ್ಲೆಯ ಬಾಣವಾರದಿಂದ ಸಿಂಗಟಗೆರೆ ಕಡೆಗೆ ಕೆರೆಸಂತೆ ನಂಜಪ್ಪನಹಳ್ಳಿ ಮಾರ್ಗವಾಗಿ ಅಕ್ರಮವಾಗಿ ಮದ್ಯವನ್ನು ಸಾಗಾಣಿಕೆ ಮಾಡುತ್ತಿದ್ದ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು ಒಟ್ಟು 6 ಜನ ಆರೋಪಿಗಳು ಸೇರಿ, 4 ದ್ವಿಚಕ್ರ ವಾಹನ, ಹಾಗೂ 18,000 ಮೌಲ್ಯದ 43.50 ಲೀಟರ್ ಮದ್ಯವನ್ನು ವಶಕ್ಕೆ ಪಡೆದು ಒಟ್ಟು 6 ಪ್ರಕರಣಗಳು ದಾಖಲಿಸಿರುತ್ತಾರೆ.

ಹಾಗೆಯೇ ಇನ್ನೊಂದು ಕಾರ್ಯಾಚರಣೆಯಲ್ಲಿ ಬಾಣವಾರದಿಂದ ಮಾಚಗೊಂಡನಹಳ್ಳಿ ಚೆಕ್ ಪೋಸ್ಟ್ ಮೂಲಕ ಸಖರಾಯಪಟ್ಟಣದ ಕಡೆಗೆ ಅಕ್ರಮವಾಗಿ ಮದ್ಯವನ್ನು ಸಾಗಾಣಿಕೆ ಮಾಡುತ್ತಿದ್ದ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು ಸುಮಾರು 10 ಜನ ಆರೋಪಿಗಳನ್ನು ಬಂಧಿಸಿ, 9 ದ್ವಿಚಕ್ರ ವಾಹನ, ಹಾಗೂ 89,843ರೂ ಮೌಲ್ಯದ ಒಟ್ಟು 230.04ಲೀಟರ್ ಮದ್ಯವನ್ನು ವಶ ಪಡಿಸಿಕೊಂಡು ಒಟ್ಟು 5 ಪ್ರಕರಣಗಳನ್ನು ದಾಖಲಿಸ