ಈಗಾಗಲೇ ರಾಜ್ಯ ಸರ್ಕಾರ ಜೂನ್ 7 ರ ವರೆಗೆ ಲಾಕ್ ಡೌನ್ ಘೋಷಣೆ ಮಾಡಿದೆ ಇದರ ಬೆನ್ನಲ್ಲೇ ಚಿಕ್ಕಮಗಳೂರು ಜಿಲ್ಲೆಯಲ್ಲಿ ಈಗಾಗಲೇ ಇದ್ದ ಸಂಪೂರ್ಣ ಲಾಕ್ ಡೌನ್ ಅನ್ನು ಮೇ 28 ರ ಬೆಳಗ್ಗೆ 6 ಗಂಟೆವರೆಗೂ ಮುಂದೂಡಿ ಆದೇಶ ಹೊರಡಿಸಲಾಗಿದೆ.
ಈ ಆದೇಶದ ಅನ್ವಯ ಈಗ ಜಿಲ್ಲೆಯಲ್ಲಿ ಜಾರಿಯಲ್ಲಿದ್ದ ಮಾದರಿಯಲ್ಲೇ 28ರ ತನಕವೂ ಮುಂದುವರೆಯಲಿದ್ದು ಬೆಳಿಗ್ಗೆ 6 ರಿಂದ 10ಗಂಟೆಯ ವರೆಗೆ ಅಗತ್ಯವಸ್ತುಗಳ ಹೋಂ ಡೆಲಿವರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು ಯಾವುದೇ ಅಂಗಡಿಗಳನ್ನು ಸಾರ್ವಜನಿಕ ಸೇವೆಗೆ ತೆರೆಯುವಂತಿಲ್ಲ, ತುರ್ತು ಮೆಡಿಕಲ್ ಸೇವೆ ಹೊರತುಪಡಿಸಿ ವಾಹನ ಸಂಚಾರ ಸಂಪೂರ್ಣ ಬಂದ್ ಆಗಿರಲಿದೆ. ತಳ್ಳುವ ಗಾಡಿಯಲ್ಲಿ ಹಣ್ಣು ತರಕಾರಿ ಮಾರಾಟಕ್ಕೆ ಅವಕಾಶ ನೀಡಲಾಗಿದ್ದು ಇನ್ನುಳಿದಂತೆ ಮದುವೆ ಸಮಾರಂಭಗಳಿಗೆ 10 ಜನರಿಗೆ ಅವಕಾಶ, ಬ್ಯಾಂಕಿನಲ್ಲಿ ಸಾರ್ವಜನಿಕ ಸೇವೆ ಇಲ್ಲ - ಕೇವಲ ಸಿಬ್ಬಂದಿಗಷ್ಟೇ ಅನುಮತಿ, ಹೊರ ಜಿಲ್ಲೆಯಿಂದ ಬಂದವರಿಗೆ 14 ದಿನ ಕ್ವಾರಂಟೈನ್ ಸೇರಿದಂತೆ ಈ ಹಿಂದೆ ನೀಡಲಾಗಿದ್ದ ಎಲ್ಲಾ ಸೂಚನೆಗಳು ಯಥಾ ಪ್ರಕಾರ ಜಾರಿಯಲ್ಲಿರಲಿದೆ.
ಈ ಹಿಂದಿನ ನಾಲ್ಕು ದಿನಗಳ ಲಾಕ್ಡೌನ್ ಸಂಪೂರ್ಣ ಯಶಸ್ವಿಯಾಗಿದ್ದು, ಇನ್ನೂ ನಾಲ್ಕು ದಿನಗಳ ಕಾಲ ಲಾಕ್ಡೌನ್ ಮುಂದುವರಿಸಿದ್ದೇವೆ ಸಾರ್ವಜನಿಕರು ಸಹಕರಿಸಬೇಕಾಗಿ ಜಿಲ್ಲಾಧಿಕಾರಿ ಕೆ.ಎನ್ ರಮೇಶ್ ಮನವಿ ಮಾಡಿದ್ದಾರೆ.


0 Comments