ಚಿಕ್ಕಮಗಳೂರು ಅರಣ್ಯ ವಲಯದ ಕೆಸವಿನಮನೆ ಗ್ರಾಮದ ಬಳಿ ಜಿಂಕೆ ಬೇಟೆ ಆಡಿದ ಸಂಬಂಧ, 3 ದ್ವಿಚಕ್ರ ವಾಹನ ಮತ್ತು ಒಂದು ಅಕ್ರಮ ಕೆಪಿನ ಕೋವಿ ವಶಪಡಿಸಿಕೊಂಡು, ವನ್ಯಜೀವಿ ಸಂರಕ್ಷಣೆ ಕಾಯ್ದೆ ಅನ್ವಯ ಪ್ರಕಾರ ದಾಖಲಿಸಲಾಗಿದೆ.

ಕೆಸವಿನ ಮನೆ ಗ್ರಾಮದ ಸನಗೆನ ಗೌಡ, ದುರ್ಗೆಗೌಡ, ನಾರಾಯಣ ತಿರುಗುಣ ಗ್ರಾಮದ ಯೋಗೇಶ, ಭೂದನಿಕೆ ಗ್ರಾಮದ ಶಂಕರಪ್ಪ ಮಂಡಲ ಮನೆ ಗ್ರಾಮದ ರಾಜು ಸ್ಥಳದಿಂದ ತಪ್ಪಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಗುಂಡು ತಾಗಿದ ಜಿಂಕೆಗೆ ಚಿಕಿತ್ಸೆ ನೀಡಿದರು ಫಲಕಾರಿಯಾಗದೆ ಮೃತಪಟ್ಟಿದೆ. ಕಾರ್ಯಾಚರಣೆ ಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮುದ್ದಣ , ಸಿಬ್ಬಂದಿಗಳಾದ ಕೆ ಕೆ ರಮೇಶ್, ಗೌರೀಶ್, ಶಿವರಾಜ್ ಇದ್ದರು.