ಚಿಕ್ಕಮಗಳೂರು : ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದ್ದು ಒಟ್ಟು 48 ಮಂದಿ ಪೊಲೀಸರಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿದೆ ಎಂದು ಎಸ್ ಪಿ ಅಕ್ಷಯ್ ಅವರು ಮಾಹಿತಿ ನೀಡಿದ್ದಾರೆ.
ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರಲ್ಲಿ ಕೋವಿಡ್ ಕಾಣಿಸಿಕೊಂಡ ಹಿನ್ನಲೆಯಲ್ಲಿ ಆತಂಕ ಹೆಚ್ಚು ಮಾಡಿದೆ. ಒಂದೆಡೆ ಕರ್ತವ್ಯನಿರತ ಪೊಲೀಸರನ್ನು ಕೋವಿಡ್ ಬೆಂಬಿಡದೇ ಕಾಡುತ್ತಿದ್ದರೆ ಮತ್ತೊಂದೆಡೆ ಸಿಬ್ಬಂದಿ ಕೊರತೆ ಮೊದಲಿನಿಂದಲೂ ಇದ್ದು ಅತಿಯಾದ ಕಾರ್ಯ ಒತ್ತಡದಿಂದ ರೋಸಿ ಹೋಗುವಂತಾಗಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ರಸ್ತೆಗಿಳಿದ 210 ವಾಹನಗಳು ಸೀಜ್, 42ಕೇಸ್:
ಜಿಲ್ಲೆಯಲ್ಲಿ ಲಾಕ್ಡೌನ್ ಸಮಯದಲ್ಲಿ ನಿಯಮ ವಿರೋಧಿಸಿ ರಸ್ತೆಗೆ ಇಳಿದ ವಾಹನಗಳನ್ನು ಪೊಲೀಸರು ಸೀಜ್ ಮಾಡುವ ಮೂಲಕ ನಿಯಮ ಪಾಲನೆ ಮಾಡದವರರಿಗೆ ತಕ್ಕ ಶಿಕ್ಷೆ ನೀಡಿದ್ದಾರೆ. ಹಾಗೆಯೇ ಸಾಮಾಜಿಕ ಅಂತರ ಪಾಲಿಸದ ಅಂಗಡಿಗಳಿಗೆ ದಂಡದ ಶಿಕ್ಷೆ ನೀಡಿದ್ದಾರೆ. ನೆನ್ನೆಯ ದಿನ 45,000 ರೂಪಾಯಿ ದಂಡ ವಸೂಲಿ ಮಾಡಲಾಗಿದ್ದು. ಮಾಸ್ಕ್ ಹಾಕದೆ ನಿಯಮ ಉಲ್ಲಂಘಿಸಿದ್ದ 300 ಜನರಿಂದ ಒಟ್ಟು 30,000 ದಂಡವನ್ನು ವಸೂಲಿ ಮಾಡಿದ್ದಾರೆ.


0 Comments