ರಾಜ್ಯದಲ್ಲಿ 14 ದಿನದ ಲಾಕ್ ಡೌನ್ ಜಾರಿಯಲ್ಲಿದ್ದು ಪಾಸಿಟಿವ್ ಕೇಸುಗಳು ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ. ಚಿಕ್ಕಮಗಳೂರು ಜಿಲ್ಲೆಯಲ್ಲೂ ಕೊರೋನಾ ಕೇಸ್ ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಕಂಡುಬರುತ್ತಿದೆ.
ನಿನ್ನೆ 5 ಸಾವು ಸಂಭವಿಸಿದ್ದಲ್ಲದೆ ಒಟ್ಟು ದಾಖಲೆಯ 542 ಪ್ರಕರಣ ದಾಖಲಾಗಿದ್ದವು. ಇಂದೂ ಜಿಲ್ಲೆಯಲ್ಲಿ ಒಟ್ಟು ದಾಖಲೆಯ 500 ಕೇಸ್ ಗಳು ಪತ್ತೆಯಾಗಿದ್ದು, 4 ಸಾವು ಸಹ ಸಂಭವಿಸಿದೆ.
ಇಂದು ಒಟ್ಟು 142 ರೋಗಿಗಳು ಆಸ್ಪತ್ರೆಯಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿರುತ್ತಾರೆ.
ತಾಲ್ಲೂಕುವಾರು ನೋಡಿದಾಗ
- ಚಿಕ್ಕಮಗಳೂರು 109
- ಶೃಂಗೇರಿ 93
- ಮೂಡಿಗೆರೆ 104
www.newsmalnad.com
- ಕೊಪ್ಪ 38
- ಎನ್ ಆರ್ ಪುರ 34
- ತರೀಕೆರೆ 50
- ಕಡೂರು 72
ಹೀಗೆ ಒಟ್ಟು 500 ಪ್ರಕರಣಗಳು ದಾಖಲಾಗಿವೆ.
ಸಾರ್ವಜನಿಕರು ಮಾಸ್ಕ್ ಧರಿಸಿ, ಅಂತರ ಕಾಪಾಡಿಕೊಂಡು ಸರ್ಕಾರದ ನಿಯಮ ಪಾಲಿಸುವ ಮೂಲಕ ಕೊರೋನಾ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಬೇಕಿದೆ.
18ವರ್ಷ ಮೇಲ್ಪಟ್ಟವರು www.cowin.gov.in ಹಾಗೂ ಆರೋಗ್ಯ ಸೇತು, ಉಮಂಗ್ ಆಪ್ ನ ಮೂಲಕ ರಿಜಿಸ್ಟರ್ ಮಾಡಿಕೊಂಡು ವ್ಯಾಕ್ಸಿನ್ ತೆಗೆದುಕೊಳ್ಳೀ.
ಅದಕ್ಕೂ ಮೊದಲು ರಕ್ತದಾನ ಮಾಡುವುದನ್ನು ಮರೆಯಬೇಡಿ. ಭಯ ಬೇಡ ಎಚ್ಚರಿಕೆ ಇರಲಿ



0 Comments