ಚಿಕ್ಕಮಗಳೂರು ಜಿಲ್ಲೆಯಲ್ಲಿ ನೆನ್ನೆ ಒಟ್ಟು 843 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದವು. ಇಂದು ಜಿಲ್ಲೆಯಲ್ಲಿ ಸುಮಾರು 671 ಪಾಸಿಟಿವ್ ಕೇಸ್ ಗಳು ಪತ್ತೆಯಾಗಿದೆ. ಜಿಲ್ಲೆ ಕಠಿಣ ಲಾಕ್ಡೌನ್ ಜಾರಿ ಮಾಡಿದ್ದು ಯಾವುದೇ ಚಟುವಟಿಕೆ ಇಲ್ಲದೇ ಜನರು ಹೈರಾಣಾಗಿದ್ದರೂ ಜಿಲ್ಲೆಯಲ್ಲಿ ಪಾಸಿಟಿವ್ ಕೇಸ್ ಗಳ ಸಂಖ್ಯೆ ಮಿತಿ ಮೀರಿ ಹೆಚ್ಚುತ್ತಿದೆ. ಇಂದು ತಾಲೂಕುವಾರು ಕೊರೋನಾ ಮಾಹಿತಿಯಲ್ಲಿ ವ್ಯತ್ಯಾಸ ಕಂಡುಬಂದಿದ್ದರಿಂದ ರಿಪೋರ್ಟ್ ತಡವಾಗಿದೆ ಎಂದು ತಿಳಿದುಬಂದಿದೆ. ಕಾಫಿನಾಡಿನ ಕಂಪ್ಲೀಟ್ ಕೊರೋನಾ ರಿಪೋರ್ಟ್ ಇಲ್ಲಿದೆ
- ಇಂದು ಸೋಂಕಿನಿಂದ ಗುಣಮುಖರಾದವರ ಸಂಖ್ಯೆ: 669
- ಜಿಲ್ಲೆಯಲ್ಲಿ ಸಾವನ್ನಪ್ಪಿರುವವರು: 1
- ಜಿಲ್ಲೆಯಲ್ಲಿ ಒಟ್ಟು ಸಕ್ರಿಯ ಪ್ರಕರಣಗಳು: 6012
ತಾಲ್ಲೂಕುವಾರು ನೋಡಿದಾಗ
ಚಿಕ್ಕಮಗಳೂರು 199
ಶೃಂಗೇರಿ 33
ಮೂಡಿಗೆರೆ 81
ಕೊಪ್ಪ 40
www.newsmalnad.com
ಎನ್ ಆರ್ ಪುರ 26
ತರೀಕೆರೆ 164
ಕಡೂರು 128
ಹೀಗೆ ಒಟ್ಟು 671 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ.
ಸಾರ್ವಜನಿಕರು ಮಾಸ್ಕ್ ಧರಿಸಿ, ಅಂತರ ಕಾಪಾಡಿಕೊಂಡು ಸರ್ಕಾರದ ನಿಯಮ ಪಾಲಿಸುವ ಮೂಲಕ ಕೊರೋನಾ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಬೇಕಿದೆ. ಭಯ ಬೇಡ ಎಚ್ಚರಿಕೆ ಇರಲಿ


0 Comments