ಚಿಕ್ಕಮಗಳೂರಿನಲ್ಲಿ ದಿನೇ ದಿನೇ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು ನಿನ್ನೆ ಜಿಲ್ಲೆಯಲ್ಲಿ ಸುಮಾರು 800ಕ್ಕೂ ಅಧಿಕ ಪ್ರಕರಣ ದಾಖಲಾಗಿದ್ದವು. ಇಂದೂ ಕೂಡ ಜಿಲ್ಲೆಯ ಅನೇಕ ಭಾಗಗಳಲ್ಲಿ ಸಮುದಾಯಕ್ಕೆ ಹಬ್ಬಿದ್ದು ಚಿಕ್ಕಮಗಳೂರು ತಾಲೂಕಿನ ಗ್ರಾಮೀಣ ಭಾಗವಾದ ಕಳ್ಳಿಕೊಪ್ಪದಲ್ಲಿ ಒಂದೇ ಗ್ರಾಮದ 75 ಜನರಿಗೆ ಸೋಂಕು ತಗುಲಿರುವುದು ಧೃಢವಾಗಿದೆ. ವಿಷಯ ತಿಳಿಯುತ್ತಿದ್ದಂತೆ ಗ್ರಾಮಕ್ಕೆ ಅಧಿಕಾರಿ ವರ್ಗ ಹಾಗೂ ಸ್ಥಳೀಯ ಶಾಸಕರು ದೌಡಾಯಿಸಿದ್ದಾರೆ. ಎಸಿ ನಾಗರಾಜ್, ಪಿಡಿಓ, ಚಿಕ್ಕಮಗಳೂರು ತಹಶೀಲ್ದಾರ್ ಕಾಂತರಾಜ್ ಸೇರಿದಂತೆ ಇತರೆ ಅಧಿಕಾರಿಗಳು ಭೇಟಿ ನೀಡಿದ್ದು ಸಂಪೂರ್ಣ ಗ್ರಾಮವನ್ನು ಸೀಲ್ ಡೌನ್ ಮಾಡಿದ್ದಾರೆ.
ಗ್ರಾಮಕ್ಕೆ ಶಾಸಕ ಸಿಟಿ ರವಿ ಭೇಟಿ, ಆಹಾರ ಕಿಟ್ ವಿತರಣೆ
ಒಂದೇ ಗ್ರಾಮದ 47 ಕುಟುಂಬದ 75 ಮಂದಿಗೆ ಸೋಂಕು ಹರಡಿರುವ ಕುರಿತು ಶಾಸಕ ಸಿಟಿ ರವಿ ಆತಂಕ ವ್ಯಕ್ತಪಡಿಸಿದ್ದು, ಗ್ರಾಮಕ್ಕೆ ಭೇಟಿ ನೀಡಿ ಧೈರ್ಯ ಹೇಳಿ ಎಲ್ಲರಿಗೂ ಆಹಾರ ಹಾಗೂ ಔಷಧಿಯ ಕಿಟ್ ವಿತರಿಸಿದ್ದಾರೆ.


0 Comments