ಕಳೆದ 15 ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಗೆ ಕೊರೋನಾ ರೋಗವು ದೃಢಪಟ್ಟಿದ್ದು ಈ ದಿನ ಬೆಳಗ್ಗೆ ಚಿಕ್ಕಮಗಳೂರು ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾರೆ, ಅವರ ಶವವನ್ನು ಶಿವಗಿರಿ ಸೇವಕರು ತಂಡ ಹಾಗೂ ಶೌರ್ಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ವತಿಯಿಂದ ಅಂತ್ಯ ಸಂಸ್ಕಾರ ನಡೆಸಲಾಯಿತು ಈ ಸಂದರ್ಭದಲ್ಲಿ ಪ್ರವೀಣ್ ಪೂಜಾರಿ, ಸಂತೋಷ್ ಕೋಟ್ಯಾನ್, ಹರೀಶ್ ಗೌಡ, ಪ್ರವೀಣ್ ಅಚ್ಚು, ಶಶಿ ಕೆಲ್ಲೂರು, ರವೀಂದ್ರ ಬಂಕಲ್, ಹಾಗೂ ಅವರ ಮನೆಯವರು ಈ ಕಾರ್ಯದಲ್ಲಿ ಭಾಗಿಯಾಗಿದ್ದರು.

ಶಿವಗಿರಿ ತಂಡ ಹಾಗೂ ಶೌರ್ಯ ರಾಷ್ಟ್ರೀಯ ವಿಪತ್ತು ತಂಡವು ಈ ಹಿಂದೆಯೂ ಹಲವು ಮೃತ ಕೊರೋನಾ ರೋಗಿಗಳ ಅಂತ್ಯಸಂಸ್ಕಾರ ಮಾಡಿದ್ದು, ಮುಂದೆಯೂ ಅಂತಹ ಸಂಧರ್ಭ ಒದಗಿದಲ್ಲಿ ತಮ್ಮನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ.
ಸಂಪರ್ಕ ಪ್ರವೀಣ್ ಪೂಜಾರಿ: 8764711543