ಸಕಲೇಶಪುರ ತಾಲ್ಲೂಕಿನ ಹಸಿಡೆ ಗ್ರಾಮದ ಬಳಿ ಇದೇ ಮಂಗಳವಾರ ರಾತ್ರಿ ಸಮಯದಲ್ಲಿ ಬೆಂಗಳೂರಿನಿಂದ ಕಾರವಾರ ಕಡೆಗೆ ಚಲಿಸುತ್ತಿದ್ದ ಎಕ್ಸ್ ಪ್ರೆಸ್ ರೈಲಿಗೆ ಸಿಲುಕಿ ಒಂಟಿ ಸಲಗವೊಂದು ಮೃತ ಪಟ್ಟಿರುವ ಘಟನೆ ನಡೆದಿದೆ.
ರಾತ್ರಿ ಹೊತ್ತು ಹಳಿಗಳನ್ನು ದಾಟಿ ಚಲಿಸುತ್ತಿರುವಾಗ ರೈಲು ವೇಗವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ ಸಾವನ್ನಪ್ಪಿದೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತದೆ. ಆನೆಯ ಶವವನ್ನು ಟ್ರೇನ್ ಮೂಲಕ ಕಾಡಿನಿಂದ ಸಾಗಿಸಲಾಗಿದೆ. (ವೀಡಿಯೋ ನೋಡಿ)
ಅವೈಜ್ಞಾನಿಕ ಮಾನವ ಕೇಂದ್ರೀತ ಅಭಿವೃದ್ಧಿಗೆ ಇನ್ನೂ ಅದೆಷ್ಟು ಅಮಾಯಕ ಜೀವಿಗಳು ಬಲಿಯಾಗಬೇಕಿವೆಯೋ.


0 Comments