ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕು ಕಿರಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊತ್ತಿಕೆರೆ ಗ್ರಾಮದ ಕಾಫಿ ತೋಟವೊಂದರಲ್ಲಿ ನಾಯಿಗಳು ಸಾಮೂಹಿಕ ದಾಳಿ ಮಾಡಿದ ಪರಿಣಾಮ ತೀವ್ರ ಗಾಯಗೊಂಡ ಪರಿಣಾಮ ಜಿಂಕೆಯೊಂದು ಸಾವನ್ನಪ್ಪಿದೆ.

ನಾಳಿಗಳ ದಾಳಿಗೆ ಒಳಗಾಗಿ ಕಾಲು ಮುರಿತಕ್ಕೆ ಒಳಗಾಗಿದ್ದ ಜಿಂಕೆಯನ್ನು ರಕ್ಷಣೆ ಮಾಡಿದ ಸ್ಥಳೀಯರು ತಕ್ಷಣವೇ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಆದರೆ ಸಿಬ್ಬಂಧಿಗಳು ಸ್ಥಳಕ್ಕೆ ಬರುವುದರ ಒಳಗೆ ಜಿಂಕೆಯು ಸಾವನ್ನಪ್ಪಿತ್ತು. ಸಧ್ಯ ಜಿಂಕೆಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಮೂಡಿಗೆರೆಗೆ ತೆಗೆದುಕೊಂಡು ಹೋಗಲಾಗಿದೆ.

ಇತ್ತೀಚೆಗೆ ಮಲೆನಾಡಿನ ಭಾಗದಲ್ಲಿ ಬೇಟೆಗೆ ಉರುಳು ಹಾಕುವುದು, ಹಾಗೂ ನಾಯಿಗಳ ದಾಳಿಗೆ ಒಳಗಾಗಿ ವನ್ಯಜೀವಿಗಳ ಸಾವು ಹೆಚ್ಚುತ್ತಿರುವುದು ಪ್ರಾಣಿ ಪ್ರಿಯರ ಆತಂಕಕ್ಕೆ ಕಾರಣವಾಗಿದೆ.