ಬೆಂಗಳೂರು ಬಿಬಿಎಂಪಿ ಬೆಡ್ ಹಗರಣ ಹೊರಗೆಳೆದಿದ್ದ ತೇಜಸ್ವಿ ಸೂರ್ಯ ಆರೋಪಿಗಳ ಪಟ್ಟಿಯನ್ನೂ ನೀಡಿದ್ದರು, ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ಸಿದ್ದರಾಮಯ್ಯ ತಿನ್ನುವ ಅನ್ನದಿಂದ ಹಿಡಿದು ಮನುಷ್ಯನ ಪ್ರಾಣದ ವರೆಗೆ ಎಲ್ಲದರಲ್ಲೂ ಜಾತಿ ಧರ್ಮವನ್ನು ಎಳೆದು ತರುವ ನಿಮ್ಮ ಕೊಳಕು ಬುದ್ಧಿಯನ್ನು ಕೊರೋನಾ ರೋಗಕ್ಕೂ ಯಾಕೆ ಎಳೆದು ತರುತ್ತೀರಾ ತೇಜಸ್ವಿ ಸೂರ್ಯ? ಕೊರೋನಾ ವೈರಸ್ ಗಿಂತಲೂ ಅಪಾಯಕಾರಿ ನಿಮ್ಮ ಮೆದುಳಿನಲ್ದಿರುವ ಕೋಮು ವೈರಸ್. ಅದಕ್ಕೆ ಚಿಕಿತ್ಸೆ ಮಾಡಿಕೊಳ್ಳೀ ಎಂದಿದ್ದರು.
ಅದಕ್ಕೆ ತೀರುಗೇಟು ನೀಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಸಂಸದ ತೇಜಸ್ವಿ ಸೂರ್ಯ ಅವರು ಎಲ್ಲಿ ಜಾತಿ ಧರ್ಮದ ಕುರಿತಾಗಿ ಮಾತನಾಡಿದ್ದರು ಮಾಜಿ ಮುಖ್ಯಮಂತ್ರಿಗಳೇ? ಅವರು ಅಪರಾಧಿಗಳ ಹೆಸರನ್ನಷ್ಟೇ ಹೇಳಿದರು, ಅಪರಾಧಿಗಳ ಸಮರ್ಥನೆಗೆ ಆ ಹೆಸರುಗಳಲ್ಲಿ ಜಾತಿ ಧರ್ಮ ಹುಡುಕಾಡಿ ಅಳುತ್ತಿರುವವರು ತಾವೇ ಸನ್ಮಾನ್ಯ ಸಿದ್ದರಾಮಯ್ಯನವರೆ. ನಿಮ್ಮ ಮಾತನ್ನು ತೇಜಸ್ವಿ ತಲೆಗೆ ಯಾಕೆ ಕಟ್ಟುತ್ತಿರಿ? ನಾಚಿಕೆಯಾಗಬೇಕು ನಿಮಗೆ ಎಂದು ಖಾರವಾದ ಪ್ರತಿಕ್ರಿಯಿಸಿದ್ದಾರೆ.


0 Comments