ಚಿಕ್ಕಮಗಳೂರಿನ ಆಸ್ಪತ್ರೆಗಳಲ್ಲಿ ಐಸಿಯು ಬೆಡ್ಗಳು ಸಂಪೂರ್ಣ ತುಂಬಿದ್ದು, ಐಸಿಯು ಸೌಲಭ್ಯ ಸಿಗದೆ ಇಬ್ಬರು ಮರಣ ಹೊಂದಿದ್ದಾರೆ. ಹಾಗೆಯೇ ಆಕ್ಸಿಜನ್ ಕೊರತೆ ಕೂಡ ಇದೆ ಎಂಬ ಸುದ್ದಿಯೊಂದು ನೆನ್ನೆಯಿಂದ ಎಲ್ಲೆಡೆ ಹರಡಿದ್ದು ಇದಕ್ಕೆ ಸ್ಪಷ್ಠನೆ ನೀಡಿರುವ ಚಿಕ್ಕಮಗಳೂರು ಶಾಸಕ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರು ಚಿಕ್ಕಮಗಳೂರು ಜಿಲ್ಲೆಯಲ್ಲಿ ಆಕ್ಸಿಜನ್ ಲಭ್ಯತೆಯ ಕುರಿತಾಗಿ ಆತಂಕ ಬೇಡ. ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಿಗೆ ಬೇಕಾದಷ್ಟು ಆಕ್ಸಿಜನ್ ದೊರಕುತ್ತಿದೆ. 

ಮುಂಜಾಗ್ರತಾ ಕ್ರಮವಾಗಿ ನಿನ್ನೆ ರಾತ್ರಿ ಕೇಂದ್ರ ಪೆಟ್ರೋಲಿಯಂ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಅವರೊಂದಿಗೆ ಮಾತನಾಡಿದ್ದು MRPL ನ CSR ಫಂಡಿನಿಂದ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಈಗಿರುವ ಸೌಲಭ್ಯದ ಜೊತೆ ಮುಂದಿನ ಇಪ್ಪತ್ತು ದಿನದೊಳಗೆ 1000KL ಆಕ್ಸಿಜನ್ ಪ್ಲಾಂಟ್ ಹಾಕುವ ಭರವಸೆ ನೀಡಿದ್ದಾರೆ. 

ಹಾಸನ ಹಾಗೂ ಶಿವಮೊಗ್ಗದಿಂದ ರಿಫಿಲ್ಲಿಂಗ್ ಯೂನಿಟ್ ಗಳಿಂದ ಬರುವ ಆಕ್ಸಿಜನ್ ಪೂರೈಕೆಯಲ್ಲಿ ಉಂಟಾದ ಲೋಪಗಳನ್ನು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ ಎಸ್ ಯಡಿಯೂರಪ್ಪ ಅವರ ಗಮನಕ್ಕೆ ತಂದಿದ್ದು ಮುಖ್ಯಮಂತ್ರಿಗಳು ಅದನ್ನು ಪರಿಹರಿಸುವ ಭರವಸೆ ನೀಡಿದ್ದಾರೆ. ಹಾಗಾಗಿ ಜಿಲ್ಲೆಯ ಜನರಿಗೆ ಈ ಕುರಿತು ಗೊಂದಲ ಅಥವಾ ಭಯ ಬೇಡ ಎಂದಿದ್ದಾರೆ.