ಶೃಂಗೇರಿಯ ಗಣಪತಿ ನಾಯಕ್ ಅವರ ಪುತ್ರ, ಉದ್ಯಮಿ ಹೆಚ್ ಜಿ ಮಾಧವ ನಾಯಕ್ (80) ಅವರು ಇಂದು ಬೆಳಿಗ್ಗೆ ಕೋವಿಡ್ ನಿಂದ ಶಿವಮೊಗ್ಗದಲ್ಲಿ ಮೃತಪಟ್ಟಿದ್ದಾರೆ.
ಹೆಚ್ ಜಿ ಮಾಧವ ನಾಯಕ್ ಮೂಲತಃ ಶೃಂಗೇರಿಯವರು, ಶಿವಮೊಗ್ಗದ ವಿನಾಯಕ ಅಡಿಕೆ ಮಂಡಿಯ ಮಾಲೀಕರಾಗಿದ್ದು ಕಳೆದ ಅನೇಕ ವರ್ಷಗಳಿಂದ ಶಿವಮೊಗ್ಗದಲ್ಲೇ ವಾಸವಿದ್ದರು. ಮಲೆನಾಡು ಭಾಗದ ಅಡಿಕೆ ಬೆಳೆಗಾರರಿಗೆ ಚಿರಪರಿಚಿತರು. ಹೆಬ್ಬಾಗಿಲು ಲಕ್ಷ್ಮೀ ವೆಂಕಟರಮಣ ದೇವಾಲಯ ಕಮಿಟಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಮೃತರ ಅಗಲಿಕೆಗೆ ಕುಟುಂಬಸ್ಥರು, ಬಂಧುಗಳು ಸಂತಾಪ ಸೂಚಿಸಿದ್ದಾರೆ.


0 Comments