ಚಿಕ್ಕಮಗಳೂರು ಜಿಲ್ಲೆಯಲ್ಲಿ ನೆನ್ನೆ ಒಟ್ಟು 533 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದವು. ಇಂದು ಜಿಲ್ಲೆಯಲ್ಲಿ ಸುಮಾರು 797 ಪಾಸಿಟಿವ್ ಕೇಸ್ ಗಳು ಪತ್ತೆಯಾಗಿದೆ. ಕಳೆದ ಒಂದು ತಿಂಗಳಿನಿಂದಲೂ ಕಾಫಿನಾಡಿನ ಕೊರೋನಾ ಕೇಸ್ ಗಳಲ್ಲಿ ಯಾವುದೇ ಚೇತರಿಕೆ ಕಂಡುಬರುತ್ತಿಲ್ಲ. ಪ್ರತಿದಿನ ಸರಾಸರಿ 500 ರಿಂದ 600 ಕೇಸ್ ಗಳು ದಾಖಲಾಗುತ್ತಲೇ ಇವೆ. ಇನ್ನು ಗುಣಮುಖರಾತ್ತಿರುವವರ ಸಂಖ್ಯೆ ಹೆಚ್ಚಾಗಿದ್ದರೂ  ಕೊರೋನಾ ಬಗೆಗಿನ ಗಂಭೀರತೆ ಸಾರ್ವಜನಿಕ ವಲಯಯಲ್ಲಿ ಕಾಣುತ್ತಿಲ್ಲ. ಇಂದಿನ ತಾಲೂಕುವಾರು ಅಂಕಿ ಅಂಶ ಈ ಕೆಳಕಂಡಂತಿವೆ.

  1. ಇಂದು ಗುಣಮುಖರಾಗಿ ಬಿಡುಗಡೆ ಹೊಂದಿರುವವರು- 928
  2. ಜಿಲ್ಲೆಯಲ್ಲಿ ಒಟ್ಟು ಸಕ್ರಿಯ ಪ್ರಕರಣಗಳು - 6386
  3. ಇಂದು ಸಂಭವಿಸಿದ ಸಾವುಗಳ ಸಂಖ್ಯೆ - 6

ತಾಲ್ಲೂಕುವಾರು ನೋಡಿದಾಗ 

  • ಚಿಕ್ಕಮಗಳೂರು 290
  • ಶೃಂಗೇರಿ 48
  • ಮೂಡಿಗೆರೆ 128
  • ಕೊಪ್ಪ 70

 www.newsmalnad.com 

  • ಎನ್ ಆರ್ ಪುರ 33
  • ತರೀಕೆರೆ 130
  • ಕಡೂರು 98

ಹೀಗೆ ಒಟ್ಟು 797 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ.

ಸಾರ್ವಜನಿಕರು ಮಾಸ್ಕ್ ಧರಿಸಿ, ಅಂತರ ಕಾಪಾಡಿಕೊಂಡು ಸರ್ಕಾರದ ನಿಯಮ ಪಾಲಿಸುವ ಮೂಲಕ ಕೊರೋನಾ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಬೇಕಿದೆ. 18 ವರ್ಷ ಮೇಲ್ಪಟ್ಟವರು www.cowin.gov.in ಹಾಗೂ ಆರೋಗ್ಯ ಸೇತು, ಉಮಂಗ್ ಆಪ್ ನ ಮೂಲಕ ರಿಜಿಸ್ಟರ್ ಮಾಡಿಕೊಂಡು ಮುಂದೆ ವ್ಯಾಕ್ಸಿನ್ ತೆಗೆದುಕೊಳ್ಳಿ. ಅದಕ್ಕೂ ಮೊದಲು  ರಕ್ತದಾನ ಮಾಡಿ. ಭಯ ಬೇಡ ಎಚ್ಚರಿಕೆ ಇರಲಿ