ಕೊಪ್ಪ ಸಾರ್ವಜನಿಕ ಆಸ್ಪತ್ರೆಯ ಅರವಳಿಕೆ ತಜ್ಞರಾದ ಡಾ.ಧನಂಜಯ ಅವರನ್ನು ಏಕಾಏಕಿ ಶಿವಮೊಗ್ಗ ಸರ್ಕಾರಿ ಮೆಡಿಕಲ್ ಕಾಲೇಜಿಗೆ ವರ್ಗಾಯಿಸಿ ಸರ್ಕಾರ ಆದೇಶಿಸಿದೆ.
ಅರವಳಿಕೆ ತಜ್ಞರಿಲ್ಲದೆ ಆಸ್ಪತ್ರೆಯಲ್ಲಿ ಯಾವುದೇ ಆಪರೇಷನ್ (ಡೆಲಿವರಿ ಸಹಿತ) ಮಾಡಲು ಸಾಧ್ಯವಿಲ್ಲ ಹಾಗೂ ಅವಕಾಶ ಸಹ ಇರುವುದಿಲ್ಲ. ದಿನವೂ ಆಸ್ಪತ್ರೆಗೆ ಸಿಸೇರಿಯನ್, ಜನರಲ್ ಸರ್ಜರಿಗೆ ಹಲವು ರೋಗಿಗಳು ಬರುತ್ತಿದ್ದು ಅದು ಸಹ ಇನ್ನು ಮುಂದೆ ಸಾಧ್ಯವಿಲ್ಲ. ಹಾಗೂ ಶಸ್ತ್ರಚಿಕಿತ್ಸೆ ವಿಚಾರದಲ್ಲಿ ಶೃಂಗೇರಿ ಹಾಗೂ ಕೊಪ್ಪ ಈ ಎರಡೂ ತಾಲೂಕಿನ ಜನ ಕೊಪ್ಪ ಆಸ್ಪತ್ರೆಯ ಮೇಲೆಯೇ ಅವಲಂಬಿತರಾಗಿದ್ದಾರೆ. ಏಕೆಂದರೆ ಶೃಂಗೇರಿ ಆಸ್ಪತ್ರೆಯಲ್ಲಿ ಸಹ ಅರವಳಿಕೆ ತಜ್ಞರು ಇಲ್ಲದ ಕಾರಣ ಯಾವುದೇ ಶಸ್ತ್ರಚಿಕಿತ್ಸೆ ನಡೆಯುತ್ತಿಲ್ಲ.
ಶೃಂಗೇರಿ ಹಾಗೂ ಕೊಪ್ಪ ತಾಲ್ಲೂಕು ಕೋವಿಡ್-19 ನಿಂದ ತತ್ತರಿಸಿ ಹೋಗಿರುವ ಇಂತಹ ಸಂದರ್ಭದಲ್ಲಿ ಶೃಂಗೇರಿ ಯಲ್ಲಿ ಹಾಗೂ ಕೊಪ್ಪ ಎರಡೂ ಆಸ್ಪತ್ರೆಯಲ್ಲಿ ಈಗ ಅರವಳಿಕೆ ತಜ್ಞರು ಸಹ ಇಲ್ಲವಾಗಿದ್ದಾರೆ. ಶಸ್ತ್ರಚಿಕಿತ್ಸೆ ಪ್ರಾಣ ಉಳಿಸಲು ಅರವಳಿಕೆ ತಜ್ಞರು ಅನಿವಾರ್ಯ ಎಂಬುದು ಆಡಳಿತ ನಡೆಸುವವರಿಗೆ ಅರ್ಥವಾಗದಿರುವುದು ಆಶ್ಚರ್ಯಕರ ಸಂಗತಿ.
ದೊಡ್ಡವರ ರಾಜಕೀಯ ಆಟಾಟೋಪಗಳ ನಡುವೆ ಜನಸಾಮಾನ್ಯರು ಹೈರಾಣಾಗುತ್ತಿದ್ದು, ಕ್ಷೇತ್ರದ ಜನತೆಯ ಅನಿವಾರ್ಯತೆ ಮನಗಂಡು ಕೂಡಲೇ ಈ ಆದೇಶ ತಡೆಹಿಡಿಯುವುದು ಅಥವಾ ಹೊಸ ಅರವಳಿಕೆ ತಜ್ಞರ ನೇಮಕವಾಗಬೇಕಿದೆ



0 Comments