ತರೀಕೆರೆ: ಉಚಿತ ಸೇವೆಗಾಗಿ ದಾನಿಗಳು ನೀಡಿದ್ದ ಆಂಬುಲೆನ್ಸ್‌ಗೆ ಅಪರಿಚಿತ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿರುವ ಘಟನೆ ತರೀಕೆರೆ ಪಟ್ಟಣದ ಇಂದಿರಾ ಕ್ಯಾಂಟೀನ್ ಬಳಿ ನಿನ್ನೆ ರಾತ್ರಿ ನಡೆದಿದೆ. ಆಂಬುಲೆನ್ಸ್‌ನ ಗಾಜನ್ನು ಒಡೆದು ಹಾಕಲಾಗಿದೆ.

ಗೋಪಿಕೃಷ್ಣ ಎಂಬುವವರು ಆಸ್ಪತ್ರೆಗೆ ಜನರ ಸೇವೆಗೆಂದು ಉಚಿತವಾಗಿ 4 ಆಂಬುಲೆನ್ಸ್‌ಗಳನ್ನು ನೀಡಿದ್ದರು. ವೆಂಟಿಲೇಟರ್‌, ಆಕ್ಸಿಜನ್‌ ಸೌಲಭ್ಯ ಒಳಗೊಂಡ ಈ 4 ಆಂಬ್ಯುಲೆನ್ಸ್‌ಗಳನ್ನು ಪಟ್ಟಣದ ಇಂದಿರಾ ಕ್ಯಾಂಟೀನ್‌ ಬಳಿ ನಿಲ್ಲಿಸಲಾಗಿತ್ತು. ನೆನ್ನೆ ರಾತ್ರಿಯ ವೇಳೆ ಕಿಡಿಗೇಡಿಗಳು 1 ಅಂಬುಲೆನ್ಸ್‌ಗೆ ಕಲ್ಲಿನಿಂದ ಹಾನಿ ಮಾಡಿದ್ದಾರೆ. ಈ ಘಟನೆ ಸಂಬಂಧ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.