ಚಿಕ್ಕಮಗಳೂರು ನಗರದಲ್ಲಿ ಇಂದು ಮನಕಲಕುವ ಘಟನೆಯೊಂದು ನಡೆದಿದ್ದು ದಂಪತಿಗಳು ಸಾವಿನಲ್ಲೂ ಒಂದಾಗಿದ್ದಾರೆ. 15 ಮೇ 2021ರ ಶನಿವಾರದಂದು ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ಸುಮಾರು 60 ವರ್ಷ ವಯಸ್ಸಿನ ಜಯಮ್ಮ ಎಂಬುವವರನ್ನು ನಗರದ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗುತ್ತದೆ.
ಅದೇ ದಿನ ಸಂಜೆ ವೇಳೆಗೆ ಈ ವಿಷಯ ತಿಳಿದಂತಹ ಅವರ ಪತಿ ಬಸವರಾಜ್( 68 ವರ್ಷ, ನಿವೃತ್ತ ASI) ಅವರಿಗೆ ಹೃದಯಾಘಾತವಾಗಿ ಕೂಡಲೇ ಅವರನ್ನು ಸರ್ಕಾರಿ ಜಿಲ್ಲಾಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಯಿತಾದರೂ ಕೆಲವು ಸಮಯದ ನಂತರ ಮರಣ ಹೊಂದಿರುತ್ತಾರೆ.
ತಾಯಿಯ ಜೀವ ಮೊದಲು ಹೋಗುವುದೆಂದು ತಿಳಿದಿದ್ದ ಮಕ್ಕಳಿಗೆ ತಂದೆಯ ಸಾವು ಆಘಾತಕಾರಿ ಸುದ್ದಿಯಾಗಿದೆ. ಮತ್ತೊಂದು ಕಡೆ ತಾಯಿಯೂ ಸಹ ಕೋವಿಡ್ ಸೋಂಕಿತೆಯಾಗಿದ್ದು. ಅವರು ಸಹ ಇಂದು ಬೆಳಗ್ಗೆ ಸುಮಾರು 11 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಮರಣ ಹೊಂದಿದ್ದು, ಸಾವಿನಲ್ಲೂ ಗಂಡ ಹೆಂಡತಿ ಒಂದಾಗಿದ್ದಾರೆ.
ಎರಡು ಕಿಲೋಮೀಟರ್ ಹೊತ್ತುಕೊಂಡು ಬಂದು ಚಿಕಿತ್ಸೆಗೆ ನೆರವು:
ಕೊಪ್ಪ ತಾಲೂಕಿನ ಭರ್ಕನಘಟ್ಟದ ಆನೇಗುಡ್ಡದ ಕೊರೋನಾ ರೋಗಿಗೆ ಉಸಿರಾಟದ ತೊಂದರೆಯಾದ ಕೂಡಲೇ ಕೊಪ್ಪದ ಅ್ಯಂಬುಲೆನ್ಸ್ ಅನ್ನು ಕರೆಸಿ ವಾಹನ ಹೋಗಲು ಸಾಧ್ಯವಾಗದ ಕಾರಣ ಮತ್ತು ಕೊರೋನಾ ಭಯದಿಂದ ಸ್ಥಳೀಯರು ಯಾರೂ ಸ್ಪಂದಿಸದ ಕಾರಣ ಸುಮಾರು ಎರಡು ಕಿಮೀ ದೂರ ರೋಗಿಯನ್ನು ಸ್ವತಃ ಪಿಪಿಇ ಕಿಟ್ ಧರಿಸಿ ಅ್ಯಂಬುಲೆನ್ಸ್ ವರೆಗೆ ಎತ್ತಿ ಕರೆದುಕೊಂಡು ಬಂದು ಕೆಡಿಪಿ ಸದಸ್ಯರಾದ ಮಣಿಕಂಠನ್ ಕಂದಸ್ವಾಮಿ , ವಿನಯ ಹಾಗೂ ಆರೋಗ್ಯ ಸಿಬ್ಬಂದಿಯಾದ ಚೆನ್ನ ಬಸಪ್ಪ ಮಾನವೀಯತೆ ಮೆರೆದಿದ್ದಾರೆ .


0 Comments