ಜನರ ಜೀವ ಮತ್ತು ಜೀವನೋಪಾಯ ಉಳಿಸಲು ಸರ್ಕಾರ ಕೈಗೊಳ್ಳಬೇಕಾದ ಪಂಚ ತುರ್ತು ಕ್ರಮಗಳ ಬಗ್ಗೆ ತಿಂಗಳಿನಿಂದ ಹೋರಾಟ ಮಾಡುತ್ತಿರುವ ಜನಾಗ್ರಹ ಆಂದೋಲನವು ಇಂದು ರಾಜ್ಯವ್ಯಾಪಿ ಜನಾಗ್ರಹಕ್ಕೆ ಕರೆ ನೀಡಿತ್ತು.
ಉಚಿತ ಚಿಕಿತ್ಸೆ, ಸರ್ವರಿಗೂ ಉಚಿತ ವ್ಯಾಕ್ಸಿನ್, ಬಿಪಿಎಲ್ ಜನರಿಗೆ ದಿನಸಿ, ಮಾಸಿಕ 5000ರೂ ನೆರವು ಧನ, ಅನಾಥವಾದ ಕುಟುಂಬಗಳಿಗೆ 5 ಲಕ್ಷ ಪರಿಹಾರ ಮತ್ತು ಕೃಷಿ ಬೀಜ, ಗೊಬ್ಬರಕ್ಕೆ ವಿಶೇಷ ಸಬ್ಸಿಡಿ ಈ ಐದು ಪಂಚ ಕ್ರಮಗಳನ್ನು ಜಾರಿಗೆ ತರಬೇಕೆಂದು ಜನಾಗ್ರಹ ಆಂದೋಲನ ಆಗ್ರಹಿಸಿ ಜನಪರ ಸಂಘಟನೆಗಳು ಹಾಗೂ ಪಕ್ಷಗಳು ಕರೆ ನೀಡಿದ್ದವು.
ಜನರ ಜೀವ ಉಳಿಸುವ ಕ್ರಮಗಳಿಗಾಗಿ ಹಾಗೂ ಸಂಕಷ್ಟದಲ್ಲಿರುವ ಜನರ ಜೀವನೋಪಾಯಕ್ಕೆ ಆಸರೆಯಾಗಬಲ್ಲ ಪ್ಯಾಕೇಜಿಗಾಗಿ ತಮ್ಮ ತಮ್ಮ ಮನೆ ಮುಂದೆಯೇ ತಟ್ಟೆ ಲೋಟ ಬಡಿದು, ಖಾಲಿ ಚೀಲ ಪ್ರದರ್ಶಿಸುವ ಮೂಲಕ ಸರ್ಕಾರದ ಗಮನ ಸೆಳೆಯತ್ತ ಜನಾಗ್ರಹದ ಕರೆಯಮೇರೆಗೆ ನಾವೂ ಬದುಕಬೇಕು ಎಂಬ ವಾಕ್ಯದೊಂದಿಗೆ ಸರ್ಕಾರವನ್ನು ಕೋವಿಡ್ ಸಂಕಷ್ಟದಲ್ಲಿ ನಲುಗಿದ ಜನರ ಆಕ್ರಂದನವನ್ನು ಹಾಗಲಗಂಚಿ, ಕಾರೇಮನೆ, ಬೈಸೆಗದ್ದೆ, ಕೌಳಿ ಹೀಗೆ ನಾನಾ ಕಡೆಗಳಲ್ಲಿ ಪ್ರತಿಭಟಿಸಿ ಜನಾಗ್ರಹಕ್ಕೆ ಸ್ಪಂದಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದರು.


0 Comments