ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂದು ದಾಖಲೆಯ ಸಂಖ್ಯೆಯಲ್ಲಿ ರೋಗಿಗಳು ಗುಣಮುಖರಾಗಿ ಮನೆಗೆ ತೆರಳಿದ್ದು ಕಾಫಿನಾಡಿಗೆ ಸಂತಸದ ವಿಷಯವಾಗಿದೆ. ನೆನ್ನೆ 3 ಸಾವು ಸಂಭವಿಸಿ ಒಟ್ಟು 356 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದವು. ಇಂದು ಜಿಲ್ಲೆಯಲ್ಲಿ ಸುಮಾರು 582 ಕೇಸ್ ಗಳು ಪತ್ತೆಯಾಗಿದ್ದು ಸ್ವಲ್ಪ ಮಟ್ಟಿಗೆ ಏರಿಕೆ ಕಂಡಿದೆ.

  • ಆಸ್ಪತ್ರೆಯಿಂದ ಬಿಡುಗಡೆಯಾಗಿ ಸುಮಾರು 537 ರೋಗಿಗಳು ಮನೆಗೆ ತೆರಳಿದ್ದಾರೆ.
  • ಜಿಲ್ಲೆಯಲ್ಲಿ ಒಟ್ಟು ಆಕ್ಟೀವ್ ಪ್ರಕರಣಗಳು - 4629

ತಾಲ್ಲೂಕುವಾರು ನೋಡಿದಾಗ 

  • ಚಿಕ್ಕಮಗಳೂರು 195
  • ಶೃಂಗೇರಿ 28
  • ಮೂಡಿಗೆರೆ 73

 www.newsmalnad.com 

  • ಕೊಪ್ಪ 08
  • ಎನ್ ಆರ್ ಪುರ 09
  • ತರೀಕೆರೆ 130
  • ಕಡೂರು 139

ಹೀಗೆ ಒಟ್ಟು 582 ಪ್ರಕರಣಗಳು ದಾಖಲಾಗಿವೆ.

ಸಾರ್ವಜನಿಕರು ಮಾಸ್ಕ್ ಧರಿಸಿ, ಅಂತರ ಕಾಪಾಡಿಕೊಂಡು ಸರ್ಕಾರದ ನಿಯಮ ಪಾಲಿಸುವ ಮೂಲಕ ಕೊರೋನಾ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಬೇಕಿದೆ. 18ವರ್ಷ ಮೇಲ್ಪಟ್ಟವರು www.cowin.gov.in ಹಾಗೂ ಆರೋಗ್ಯ ಸೇತು, ಉಮಂಗ್ ಆಪ್ ನ ಮೂಲಕ ರಿಜಿಸ್ಟರ್ ಮಾಡಿಕೊಂಡು ಮುಂದೆ ವ್ಯಾಕ್ಸಿನ್ ತೆಗೆದುಕೊಳ್ಳೀ. ಅದಕ್ಕೂ ಮೊದಲು ರಕ್ತದಾನ ಮಾಡುವುದನ್ನು ಮರೆಯಬೇಡಿ. ಭಯ ಬೇಡ ಎಚ್ಚರಿಕೆ ಇರಲಿ