ಉದ್ಯಮಿ, FKCCI ನ ಮಾಜಿ ಅಧ್ಯಕ್ಷರು, ಅಮ್ಮ ಫೌಂಡೇಶನ್ ನ ಸ್ಥಾಪಕರು ಹಾಗೂ ಖಾಸಗಿ ಶಾಲೆಗಳ ಒಕ್ಕೂಟದ (CIPSMAM) ಅಧ್ಯಕ್ಷರಾದ ಸುಧಾಕರ್ ಶೆಟ್ಟಿ ಅವರು ಖಾಸಗಿ ಶಾಲೆಗಳ ಶಿಕ್ಷಕರಿಗೆ ಸಹಾಯ ಹಸ್ತ ಚಾಚಿದ್ದಾರೆ.

ರಾಜ್ಯದಲ್ಲಿ RTE ಅಡಿಯಲ್ಲಿ ಬರುವ ಸುಮಾರು 147 ಖಾಸಗಿ ಶಾಲೆಗಳಿವೆ ಕಳೆದ ವರ್ಷ ಮಾರ್ಚ್ ನಿಂದ ಕೊರೋನಾ ಕಾರಣದಿಂದ ಶಿಕ್ಷಣ ವ್ಯವಸ್ಥೆ ಸಂಪೂರ್ಣ ಕುಸಿತ ಕಂಡಿದೆ. ಶಿಕ್ಷಣ ಸಂಸ್ಥೆಗಳ ಆಡಳಿತದ ಪರಿಸ್ಥಿತಿ ಸಹ ಚಿಂತಾಜನಕವಾಗಿದ್ದು ಶಿಕ್ಷಣದ ಪರಿಸ್ಥಿತಿ ಹದಗೆಟ್ಟಿದೆ ಆದಾಯವಿಲ್ಲದೇ ಶಿಕ್ಷಕರ ಸಂಬಳ ಸಹ ಕೊಡದೇ ಇರುವ ಪರಿಸ್ಥಿತಿಗೆ ಬಂದಿದೆ.

ಇಂತಹ ಸಂದರ್ಭದಲ್ಲಿ ಅರ್ಹರನ್ನು ಗುರುತಿಸಿ ರಾಜ್ಯಾದ್ಯಂತ ಸುಮಾರು 5000ಕ್ಕೂ ಅಧಿಕ ಕಿಟ್ ಗಳನ್ನು ಅಮ್ಮ ಫೌಂಡೇಶನ್ ವತಿಯಿಂದ ನೀಡಲಾಗಿದ್ದು, ನಾಳೆಯಿಂದ ಕೊಪ್ಪ ತಾಲೂಕಿನಲ್ಲಿ ಅರ್ಹ ಫಲಾನುಭವಿಗಳಿಗೆ ಕಿಟ್ ಹಂಚಿಕೆ ಮಾಡಲಾಗುತ್ತಿದೆ. ಮೂಲತಃ ಕೊಪ್ಪ ತಾಲೂಕಿನ ಶಾನುವಳ್ಳಿಯ ತುಮಕಾನೆಯವರಾದ ಸುಧಾಕರ್ ಶೆಟ್ಟಿ ಅವರು ಪ್ರಸ್ತುತ ಉದ್ಯಮಿಯಾಗಿದ್ದು ಮೈಸೂರಿನಲ್ಲಿ ನೆಲೆಸಿರುತ್ತಾರೆ.