ನೆನ್ನೆ ದಾಖಲಾಗಿದ್ದ ಪಾಸಿಟಿವ್ ಕೇಸುಗಳಿಗಿಂತ ಹೆಚ್ಚು ಜನರು ಇಂದು ಡಿಸ್ಚಾರ್ಜ್ ಆಗಿದ್ದು ಕಾಫಿ ನಾಡಿನ ಜನರಲ್ಲಿ ಮನೆಮಾಡಿದ್ದ ಆಂತಕ ದೂರ ಮಾಡಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ನೆನ್ನೆ 2 ಸಾವು ಸಂಭವಿಸಿ ಒಟ್ಟು 166 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದವು. ಇಂದು ಜಿಲ್ಲೆಯಲ್ಲಿ ಒಟ್ಟು 206 ಕೇಸ್ ಗಳು ಮಾತ್ರ ಪತ್ತೆಯಾಗಿದ್ದು ಸುಮಾರು 182 ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಹಾಗೆಯೇ ಇಂದು ಜಿಲ್ಲೆಯಲ್ಲಿ ಯಾವುದೇ ಸಾವು ಸಂಭವಿಸಿರುವುದಿಲ್ಲ.
ತಾಲ್ಲೂಕುವಾರು ನೋಡಿದಾಗ
- ಚಿಕ್ಕಮಗಳೂರು 58
- ಶೃಂಗೇರಿ 09
- ಮೂಡಿಗೆರೆ 36
www.newsmalnad.com
- ಕೊಪ್ಪ 21
- ಎನ್ ಆರ್ ಪುರ 24
- ತರೀಕೆರೆ 10
- ಕಡೂರು 48
ಹೀಗೆ ಒಟ್ಟು 206 ಪ್ರಕರಣಗಳು ದಾಖಲಾಗಿವೆ.
ಸಾರ್ವಜನಿಕರು ಮಾಸ್ಕ್ ಧರಿಸಿ, ಅಂತರ ಕಾಪಾಡಿಕೊಂಡು ಸರ್ಕಾರದ ನಿಯಮ ಪಾಲಿಸುವ ಮೂಲಕ ಕೊರೋನಾ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಬೇಕಿದೆ.
18ವರ್ಷ ಮೇಲ್ಪಟ್ಟವರು www.cowin.gov.in ಹಾಗೂ ಆರೋಗ್ಯ ಸೇತು, ಉಮಂಗ್ ಆಪ್ ನ ಮೂಲಕ ರಿಜಿಸ್ಟರ್ ಮಾಡಿಕೊಂಡು ಮುಂದೆ ವ್ಯಾಕ್ಸಿನ್ ತೆಗೆದುಕೊಳ್ಳೀ.
ಅದಕ್ಕೂ ಮೊದಲು ರಕ್ತದಾನ ಮಾಡುವುದನ್ನು ಮರೆಯಬೇಡಿ. ಭಯ ಬೇಡ ಎಚ್ಚರಿಕೆ ಇರಲಿ.



0 Comments