ಮೂಡಿಗೆರೆ : ಮಲೆನಾಡು ಭಾಗದಲ್ಲಿ ಈ ಹಿಂದೆ ನಿರಂತರ ಗೋಕಳ್ಳತನ, ಗೋಸಾಗಾಟ ನಡೆಯುತ್ತಿತ್ತು. ಈಗ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ ಡೌನ್ ಜಾರಿಯಲ್ಲಿದೆ ಆದರೂ ಕೂಡ ಗೋಕಳ್ಳತನ ಪ್ರಕರಣ ಬೆಳಕಿಗೆ ಬಂದಿದ್ದು, ಗ್ರಾಮಸ್ಥರೇ ಕಾದು ಕುಳಿತು ಕಳ್ಳರನ್ನು ಹಿಡಿದಿದ್ದಾರೆ.
ಮೂಡಿಗೆರೆ ತಾಲೂಕಿನ ಕುಂದೂರು, ಹುಲ್ಲೆಮನೆ ಗ್ರಾಮದ ಸಮೀಪ ದೊಡ್ಡಪ್ಪು ಎಂಬ ಗ್ರಾಮದಲ್ಲಿ ಜಾನುವಾರುಗಳನ್ನು ಕದ್ದೊಯ್ಯುತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಸ್ಥಳೀಯ ಜನರು ಕಳೆದ ಒಂದು ವಾರ ಕಾರ್ಯಾಚರಣೆ ನಡೆಸಿದ ಪರಿಣಾಮ ಶನಿವಾರ ರಾತ್ರಿ ಜಾನುವಾರು ಕದ್ದೊಯ್ಯುತ್ತಿದ್ದ ಆರೋಪಿಗಳು ಸ್ಥಳೀಯರ ಕೈಗೆ ಸಿಕ್ಕಿ ಬಿದಿದ್ದಾರೆ.
ದೊಡ್ಡಪ್ಪು ಎಂಬ ಗ್ರಾಮದಲ್ಲಿ ಪ್ರತಿನಿತ್ಯ ಜಾನುವಾರುಗಳು ಕಳವು ಆಗುತ್ತಿದ್ದವು. ಯಾರೋ ಕದ್ದೊಯ್ಯುತ್ತಿದ್ದಾರೆ ಎಂಬ ಸಂಶಯದ ಮೇರೆಗೆ ಕಳೆದ ಒಂದು ವಾರದಿಂದ ಹುಲ್ಲೆಮನೆ ಮತ್ತು ಕೊಡಗಿಬೈಲ್ ಗ್ರಾಮಸ್ಥರು ರಾತ್ರಿ ಕಾದು ವೀಕ್ಷಿಸಿದ್ದಾರೆ. ಶನಿವಾರ ಜಾನುವಾರು ಕಳ್ಳರು ಬರುವ ಖಚಿತ ಮಾಹಿತಿ ಮೇರೆಗೆ ಪೊಲೀಸರ ಸಹಾಯ ಪಡೆದು ಬೊಲೆರೋ ಕಾರಿನಲ್ಲಿ ಜಾನುವಾರುಗಳನ್ನು ತುಂಬಿಕೊಳ್ಳುತ್ತಿದ್ದ ಆರೋಪಿಗಳಾದ ಮುಶಾವೀರ್, ಯೂನಿಸ್‌ಖಾನ್, ಖಲೀಲ್‌ರನ್ನು ಹಿಡಿದು ಪೊಲೀಸರ ವಶಕ್ಕೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆ ಕುರಿತು ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


0 Comments