ವೈದ್ಯರೊಬ್ಬರು ರಸ್ತೆ ಅಫಘಾತದಲ್ಲಿ ಸಿಲುಕಿ ರಸ್ತೆ ಮಧ್ಯೆ ಸಾವು ಬದುಕಿನ ನಡುವೆ ಹೋರಾಡುತ್ತಿದ್ದರೂ ಅಲ್ಲೇ ಇದ್ದ ಶಾಸಕ ಸುರೇಶ್ ಆಸ್ಪತ್ರೆಗೆ ದಾಖಲಿಸದೆ ಬೆದರುಬೊಂಬೆಯಂತೆ ಕುಳಿತ ಘಟನೆ ತರೀಕೆರೆ ತಾಲೂಕಿನ ಲಕ್ಕವಳ್ಳಿ ಕ್ರಾಸ್ ಬಳಿ ನಡೆದಿದೆ.
ಕರೋನಾ ಡ್ಯೂಟಿ ಮುಗಿಸಿ ಮನೆಗೆ ಹಿಂದಿರುಗುವಾಗ ಅಪರಿಚಿತರ ವಾಹನವೊಂದು ಹಿರಿಯ ಆರೋಗ್ಯಾಧಿಕಾರಿಯಾದ ಡಾ. ರಮೇಶ್ ಅವರ ಬೈಕ್ ಗೆ ಡಿಕ್ಕಿ ಹೊಡೆದಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಂಧರ್ಭದಲ್ಲಿ ಅದೇ ದಾರಿಯಲ್ಲಿ ಸ್ಥಳೀಯ ಶಾಸಕ ಸುರೇಶ್ ತಮ್ಮ ಕಾರಿನಲ್ಲಿ ಬಂದರಾದರೂ ನರಳುತ್ತಾ ಇದ್ದ ವೈದ್ಯರನ್ನು ಆಸ್ಪತ್ರೆಗೆ ದಾಖಲಿಸದೆ ಕಾರಿನೊಳಗೇ ಸುಮ್ಮನೆ ಕುಳಿತು ಅಮಾನವೀಯತೆ ತೋರಿದ್ದಾರೆ.
ಆಂಬುಲೆನ್ಸ್ ಗಾಗಿ ಬಹಳಷ್ಟು ಸಮಯ ಕಾಯಬೇಕಾಯಿತು, ಆ ನಂತರ ಶಿವಮೊಗ್ಗ ಗೆ ಕರೆದುಕೊಂಡು ಹೋಗುವಾಗ ವೈದ್ಯರು ಮಾರ್ಗಮಧ್ಯೆ ಸಾವನ್ನಪ್ಪಿದರು. ಅಕಸ್ಮಾತ್ ಶಾಸಕರು ಕಾರಿನೊಳಗೆ ಸುಮ್ಮನೆ ಕುಳಿತಿರದೆ ತಮ್ಮ ವಾಹನದಲ್ಲಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ತೋರಿದ್ದರೆ ಅಪಘಾತ ಒಳಗಾದ ವೈದ್ಯರನ್ನು ಬದುಕಿಸಬಹುದಾಗಿತ್ತು ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು.



0 Comments