ಆಸ್ಪತ್ರೆಗೆ ದಾಖಲಾಗದೆ ಹೋಮ್ ಐಸೋಲೇಷನ್ ನಲ್ಲಿರುವ ರೋಗಿಗಳಿಗೆ ಮನೆಯಲ್ಲಿಯೇ ತೆಗೆದುಕೊಳ್ಳಬೇಕಾದ ಔಷಧಗಳ ಕಿಟ್ ಅನ್ನು ಸೋಂಕಿತರಿಗೆ ನೀಡುವಂತೆ ಚಿಕ್ಕಮಗಳೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಕಾರಿಗಳ ಕಛೇರಿಯಿಂದ ಆದೇಶ ಹೊರಬಿದ್ದಿದ್ದು ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆಗಳಿಗೆ ಆದೇಶ ಹೊರಡಿಸಿ ಯೋಜನೆಯನ್ನು ಜಾರಿಗೊಳಿಸಲಾಗಿದೆ.

ಸೋಂಕಿತರಿಗೆ ಈ ಮೇಲಿನ ಎಲ್ಲಾ ಔಷದಗಳು ಒಳಗೊಂಡ ಕಿಟ್ ಒಂದನ್ನು ತಯಾರಿಸಿ ಅದನ್ನು ಕವರ್ ನೊಳಗಿರಿಸಿ ನೀಡತಕ್ಕದ್ದು. ಹಾಗೂ ಮೇಲ್ವಿಚಾರಣೆ ನಡೆಸತಕ್ಕದ್ದು ಮತ್ತು ಆಕ್ಸಿಜನ್ ಸ್ಯಾಚುರೇಷನ್ ಜಾಖಲು ಮಾಡುವುದು ಆದೇಶಿಸಲಾಗಿದೆ.