ಆಲ್ದೂರು: ಆಲ್ದೂರಿನ ಸಮೀಪದ ಕೆಳಗೂರು ವ್ಯಾಪ್ತಿಯ ಚಿತ್ತುವಳ್ಳಿ ಗ್ರಾಮದ ಬಳಿ ಕಾಡಾನೆ ಓಡಿಸಲು ಹೋದ ತಂಡದ ಮೇಲೆ ಕಾಡಾನೆ ದಾಳಿ ನಡೆಸಿ ಅರಣ್ಯ ಇಲಾಖೆಯ ಗಾರ್ಡ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಪುಟ್ಟರಾಜು ಎಂಬುವವರು ಸಾವನ್ನಪ್ಪಿರುವ ಘಟನೆ ಇಂದು ಮದ್ಯಾಹ್ನದ ವೇಳೆ ನಡೆದಿದೆ. ಚಿಕ್ಕಮಗಳೂರು, ಮೂಡಿಗೆರೆ ಸುತ್ತಮುತ್ತ ಕಳೆದ ಕೆಲವು ತಿಂಗಳುಗಳಿಂದ ಕಾಡಾನೆ ಕಾಟ ಅತಿಯಾಗಿದ್ದು ಹಲವೆಡೆ ಬೆಳೆ ನಾಶ ಸಹ ಮಾಡಿದ್ದವು.
ಆದರೆ ಇದೀಗ ಗ್ರಾಮಸ್ಥರ ಮಾಹಿತಿ ಮೇರೆಗೆ ಕಾಡಾನೆ ಓಡಿಸಲು ತೆರಳಿ ಅರಣ್ಯ ಇಲಾಖೆಯ ನೌಕರ ಸಾವನ್ನಪ್ಪಿದ್ದಾರೆ. ಮೃತ ಪುಟ್ಟರಾಜುರವರು ಈ ಮೊದಲು ಭದ್ರ ಅಭಯಾರಣ್ಯದಲ್ಲಿ ಅರಣ್ಯ ವೀಕ್ಷಕನಾಗಿ ಕಾರ್ಯ ನಿರ್ವಹಿಸಿ ಪ್ರಸ್ತುತ ಆಲ್ದೂರು ವಲಯದಲ್ಲಿ ಅರಣ್ಯ ರಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಕಳೆದ ಕೆಲವು ವರ್ಷಗಳಿಂದ ಮಲೆನಾಡಿನ ಭಾಗದಲ್ಲಿ ಅತಿಯಾದ ಅರಣ್ಯ ನಾಶವಾಗಿದ್ದು, ವನ್ಯಜೀವಿಗಳ ದಾಳಿ ಹೆಚ್ಚಲು ಕಾರಣವಾಗಿದೆ ಎಂಬುದು ಪರಿಸರವಾದಿಗಳ ಅಭಿಪ್ರಾಯ.


0 Comments