ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ದ ಸೇವಾ ಭಾರತಿ ವಿಭಾಗದಿಂದ ಶೃಂಗೇರಿ ತಾಲೂಕು ಆಸ್ಪತ್ರೆಗೆ ಕೊರತೆ ಇದ್ದ ಔಷಧಿಗಳನ್ನು ನೀಡಲಾಗಿದೆ.
ಔಷಧಿ ಕಿಟ್ ಗಳನ್ನು ತಾಲೂಕು ಆಸ್ಪತ್ರೆಗೆ ನೀಡಿದ ಬಳಿಕ ಮಾತನಾಡಿದ ತಂಡದ ಸದಸ್ಯ ನೂತನ್ ಸೂರ್ಯ, ಈಗಾಗಲೇ ರಾಜ್ಯದಲ್ಲಿ ಲಾಕ್ ಡೌನ್ ವಿಸ್ತರಿಸಲಾಗಿದೆ, ಸರ್ಕಾರ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದು ನಾವು ಈ ನಿಟ್ಟಿನಲ್ಲಿ ಸರ್ಕಾರದ ಜೊತೆ ಕೈಜೋಡಿಸಬೇಕಿದೆ. ಶೃಂಗೇರಿ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳ ಆಸ್ಪತ್ರೆಗೂ ಕೊರತೆ ಇರುವ ಔಷಧಿ ಕಿಟ್ ನೀಡಲಾಗುತ್ತಿದೆ. ಈಗಾಗಲೇ ಸೇವಾ ಭಾರತಿ ಗ್ರಾಮ ಮಟ್ಟದಲ್ಲಿ ಅಧಿಕಾರಿಗಳ ಜೊತೆ ಕೆಲಸ ಮಾಡುತ್ತಿದೆ, ಮುಂದಿನ ದಿನಗಳಲ್ಲಿ ತಾಲೂಕಿನ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ, ವೈದ್ಯಕೀಯ ಸಿಬ್ಬಂದಿಗಳಿಗೆ ಸಾನಿಟೈಸರ್, ಮಾಸ್ಕ್ ಗಳನ್ನು ವಿತರಿಸುವ ಯೋಜನೆಯಿದೆ ಎಂದು ತಿಳಿಸಿದ್ದಾರೆ. ಸೇವಾ ಭಾರತಿ ತಂಡದ ಆಸ್ತಿಕ್ ಹೆಬ್ಬಾರ್ ನೂತನ್ ಸೂರ್ಯ, ಕಾರ್ತಿಕ್, ಆದರ್ಶ ಇದ್ದರು.


0 Comments