ಶೃಂಗೇರಿ : ಕರ್ನಾಟಕದ ರಾಜ್ಯ ಡಿಜಿ ಹಾಗೂ ಐಜಿಪಿ ಪ್ರವೀಣ್ ಸೂದ್ ಅವರು ಹಾಗೂ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಅವರು ಒದಗಿಸಿದ ಆಕ್ಸಿಜನ್ ಕಾನ್ಸಂಟ್ರೇಟರ್ ಯಂತ್ರವನ್ನು ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಹಂಚಿಕೆ ಮಾಡಲಾಯಿತು.

ಕೋವಿಡ್ 19 ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಉಪಯೋಗವಾಗುವ ಉದ್ಧೇಶದಿಂದ ಈ ಯಂತ್ರವನ್ನು ಇಂದು ಶೃಂಗೇರಿ ತಾಲೂಕು ಆಸ್ಪತ್ರೆಗೆ ನೀಡಲಾಯಿತು. ನಕ್ಸಲ್ ನಿಗ್ರಹ ಪಡೆಯ ಮಾನ್ಯ ಪೊಲೀಸ್ ಆಧೀಕ್ಷಕರಾದ ನಿಖಿಲ್ ಅವರು ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ವೈದ್ಯಾಧಿಕಾರಿಗಳಾದ ಡಾ. ಮಂಜುನಾಥ್, ಡಾ. ದಯಾನಂದ್, ಹಾಗೂ ಎಎನ್ ಎಫ್ ನ ರಮೇಶ್ ಕೋಳಿ, ಅಮೋಘ ಪಾಟೀಲ್ ಮತ್ತು ಸಿಬ್ಬಂಧಿಗಳು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಇದ್ದರು.

ಶೃಂಗೇರಿ: ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ನೇಮಕ

ಶೃಂಗೇರಿ : ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿದ್ದ (BEO) ನಾಗರಾಜ್ ಅವರು ಕೊರೋನಾ ಸೋಂಕಿಗೆ ತುತ್ತಾಗಿ ಮೇ 12 ರಂದು ಮೃತಪಟ್ಟಿದ್ದರು. ಈ ಹಿನ್ನಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹುದ್ದೆ ಖಾಲಿ ಇದ್ದ ಕಾರಣ ದೈನಂದಿನ ಕೆಲಸಗಳಿಗೆ ಹಾಗೂ ಆರ್ಥಿಕ ವಿಷಯ ನಿರ್ವಹಣೆಗೆ ತೊಂದರೆ ಉಂಟಾಗುತ್ತಿರುವ ಹಿನ್ನಲೆಯಲ್ಲಿ, ಸದರಿ ಹುದ್ದೆಗೆ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿಗಳಾಗಿದ್ದ ರಾಘವೇಂದ್ರ ಎನ್ ಜಿ ಅವರನ್ನು ತಾತ್ಕಾಲಿಕವಾಗಿ ನೇಮಕ ಮಾಡಿ ಚಿಕ್ಕಮಗಳೂರು ಸಾರ್ವಜನಿಕ ಇಲಾಖೆಯ ಉಪನಿರ್ದೇಶಕರು ಆದೇಶ ಹೊರಡಿಸಿದ್ದಾರೆ.