ಕೊರೋನಾ ತಡೆಗಟ್ಟಲು ರಾಜ್ಯಾದ್ಯಂತ ಲಾಕ್ಡೌನ್ ಹೇರಿದ್ದು, ಕಟ್ಟು ನಿಟ್ಟಿನ ಕ್ರಮಗಳಿಂದಾಗಿ ಆರೋಗ್ಯ ಸಮಸ್ಯೆ ಎಂದು ಆಸ್ಪತ್ರೆಗೆ ತೆರಳುವವರಿಗೆ ಹಾಗೂ ಕೋವಿಡ್ ಚೆಕ್ ಮಾಡಿಸಿಕೊಳ್ಳಲು ಆಸ್ಪತ್ರೆಗೆ ತರಳಿದವರಿಗೆ ಹೊರಗಡೆ ಊಟದ ಲಭ್ಯತೆ ಇಲ್ಲದಿರುವುದು ಅವರನ್ನು ಹಸಿವಿನಿಂದ ಬಳಲುವಂತೆ ಮಾಡಿದೆ.
ಇದನ್ನು ಮನಗಂಡ ಕೊಡಗು ರಕ್ಷಣಾ ವೇದಿಕೆ(ರಿ) ಯು "ನಮ್ಮವರಿಗಾಗಿ ನಾವು ಅಭಿಯಾನ" ಎಂಬ ಹೆಸರಿನಲ್ಲಿ ಮಡಿಕೇರಿ ಕೋವಿಡ್ ಆಸ್ಪತ್ರೆಯ ಮುಂಬಾಗದಲ್ಲಿ ವೆನ್ಲಾಕ್ ಮೆಡಿಕಲ್ಸ್ ಬಳಿ, ಕೊಡಗಿನ ವಿವಿಧ ಭಾಗಗಳಿಂದ ಕೊರೋನಾ ರೋಗಿಗಳನ್ನು ಕರೆದುಕೊಂಡು ಬರುವ ಅವರ ಸಂಬಂಧಿಕರಿಗೆ ಮತ್ತು ಸ್ವ್ಯಾಬ್ ಪರೀಕ್ಷೆಗೆ ಬರುವವರಿಗೆ ಕೊಡಗು ರಕ್ಷಣಾ ವೇದಿಕೆ ವತಿಯಿಂದ ಮಧ್ಯಾಹ್ನ ನಿತ್ಯ ಅನ್ನದಾನ ನೀಡುವ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಲಾಕ್ ಡೌನ್ ನಿಂದ ಯಾವುದೇ ಕ್ಯಾಂಟೀನ್ ಅಥವಾ ಹೋಟೆಲ್ ಇಲ್ಲದೇ ರೋಗಿಗಳು ಹಾಗೂ ಅವರ ಜೊತೆಗೆ ಬಂದಿರುವ ಸಂಬಂಧಿಕರು ಹಸಿವಿನಿಂದ ಬಳಲಬಾರದು ಎಂಬ ಸದುದ್ದೇಶದಿಂದ ಪ್ರಾರಂಭಗೊಂಡಿರುವ ಈ ಅಭಿಯಾನಕ್ಕೆ ಜನರಿಂದ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದೆ.



0 Comments