ಕಾಫಿನಾಡು ಚಿಕ್ಕಮಗಳೂರು ನಾಲ್ಕು ದಿನ ಸಂಪೂರ್ಣ ಲಾಕ್ ಡೌನ್ ಆದ ಬೆನ್ನಲ್ಲೇ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಲಾಗಿದೆ.
ಶೃಂಗೇರಿಯಲ್ಲಿ ಒಟ್ಟು ಮೂರು ಮಾರ್ಷಲ್ ಗಳ ತಂಡ ಮಾಡಲಾಗಿದ್ದು, ಶೃಂಗೇರಿ ಕಸಬ, ಗ್ರಾಮಾಂತರ ಹಾಗೂ ಕಿಗ್ಗಾದಲ್ಲಿ ಈ ತಂಡಗಳು ಕಾರ್ಯ ನಿರ್ವಹಿಸಲಿವೆ. ಮಾಸ್ಕ್ ಧರಿಸದ, ಸಾಮಾಜಿಕ ಅಂತರ ಕಾಯ್ದುಕೊಳ್ಳದ ಅಂಗಡಿಗಳಿಗೆ ದಂಡ ವಿಧಿಸಲಾಗುತ್ತಿದೆ. ಈವರೆಗೆ ಶೃಂಗೇರಿ ಮಾರ್ಷಲ್ ಗಳಿಂದ, ಮಾಸ್ಕ್ ಹಾಕದ, ನಿಯಮ ಉಲ್ಲಂಘಿಸಿದ ಅಡಿಯಲ್ಲಿ ಸಾರ್ವಜನಿಕರಿಗೆ, ಅಂಗಡಿಗೆ ಸೇರಿದಂತೆ ಒಟ್ಟು 127 ಮಂದಿಗೆ ದಂಡ ವಿಧಿಸಿಲಾಗಿದೆ. ಇನ್ನು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು ನಿಯಮ ಉಲ್ಲಂಘಿಸಿದ ಅಡಿಯಲ್ಲಿ ಈವರೆಗೆ 753 ಮಂದಿಗೆ ದಂಡ ವಿಧಿಸಿದ್ದಾರೆ ಅಲ್ಲದೆ ಒಂದು FIR ದಾಖಲಾಗಿದೆ ಎಂದೆ ತಿಳಿದುಬಂದಿದೆ.
ಇನ್ನುಮುಂದೆ ಹೋಂ ಕ್ವಾರಂಟೈನ್ ಇರಲ್ಲ
ಮುಂದಿನ ದಿನಗಳಲ್ಲಿ ಹೋಂ ಕ್ವಾರಂಟೈನ್ ತೆಗೆದು ಕ್ವಾರಂಟೈನ್ ಕೇಂದ್ರಗಳನ್ನು ತೆರೆಯಲಾಗುತ್ತದೆ ಈಗಾಗಲೇ ಸ್ಥಳ ಗುರುತಿಸಲಾಗಿದೆ ಎಂದು ತಿಳಿಬಂದಿದೆ.


1 Comments
ನಿಮ್ಮ ನಿಯಮ ಎಲ್ಲಿಯೂ ಸರಿಯಾಗಿ ನೆಡೆಯುತ್ತಿಲ್ಲ. ಸಂಜೆ 6 ಗಂಟೆ ಯ ನಂತರ ಎಲ್ಲಾ ಮಾಮೂಲಿನಂತೆ ಯಾರು ಮಾಸ್ಕ್ ಹಾಕುವುದಿಲ್ಲ. ಎಲ್ಲರದ್ದೂ ಸಂಜೆಯ ತಿರುಗಾಟ fix. ಏನಾದರೂ ಸರಕಾರ ನೋಡಿಕೊಳ್ಳುತ್ತೆ ಸಮಾಜದ ಪ್ರತಿ ನಮ್ಮ ಜವಾಬ್ದಾರಿ ಶೂನ್ಯ.
ReplyDelete