ಉದ್ಯಮಿ, FKCCI ನ ಮಾಜಿ ಅಧ್ಯಕ್ಷರು, ಅಮ್ಮ ಫೌಂಡೇಶನ್ ನ ಸ್ಥಾಪಕರು ಹಾಗೂ ಖಾಸಗೀ ಶಾಲೆಗಳ ಒಕ್ಕೂಟದ ಅಧ್ಯಕ್ಷರಾದ ಸುಧಾಕರ್ ಶೆಟ್ಟಿ ಅವರು ಖಾಸಗೀ ಶಾಲೆಗಳ ಶಿಕ್ಷಕರಿಗೆ ಸಹಾಯ ಹಸ್ತ ಚಾಚಿದ್ದಾರೆ.

ರಾಜ್ಯದಲ್ಲಿ RTE ಅಡಿಯಲ್ಲಿ ಬರುವ ಸುಮಾರು 147 ಖಾಸಗೀ ಶಾಲೆಗಳಿವೆ ಕಳೆದ ವರ್ಷ ಮಾರ್ಚ್ ನಿಂದ ಕೊರೋನಾ ಕಾರಣದಿಂದ ಶಿಕ್ಷಣ ವ್ಯವಸ್ಥೆ ಸಂಪೂರ್ಣ ಕುಸಿತ ಕಂಡಿದೆ. ಆಡಳಿತ ಮಂಡಳಿಯ ಪರಿಸ್ಥಿತಿ ಸಹ ಚಿಂತಾಜನಕವಾಗಿದ್ದು ಶಿಕ್ಷಣದ ಪರಿಸ್ಥಿತಿ ಹದಗೆಟ್ಟಿದೆ, ಆದಾಯವಿಲ್ಲದೇ ಶಿಕ್ಷಕರ ಸಂಬಳ ಸಹ ಕೊಡದೇ ಇರುವ ಪರಿಸ್ಥಿತಿಗೆ ಬಂದಿದೆ. ಇಂತಹ ಸಂದರ್ಭದಲ್ಲಿ ಅರ್ಹರನ್ನು ಗುರುತಿಸಿ ರಾಜ್ಯಾದ್ಯಂತ ಸುಮಾರು 5000ಕ್ಕೂ ಅಧಿಕ ಕಿಟ್ ಗಳನ್ನು ಅಮ್ಮ ಫೌಂಡೇಶನ್ ವತಿಯಿಂದ ನೀಡಲಾಗಿದ್ದು, ಇಂದು ಕೊಪ್ಪ ತಾಲೂಕಿನಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸಿ 50ಕ್ಕೂ ಅಧಿಕ ಕಿಟ್ ಗಳ ಹಂಚಿಕೆ ಮಾಡಲಾಯಿತು.

ಈ ಕುರಿತು ನ್ಯೂಸ್ ಮಲ್ನಾಡ್ ನೊಂದಿಗೆ ಮಾತನಾಡಿದ ಸುಧಾಕರ್ ಶೆಟ್ಟಿ ಅವರು ಶಿಕ್ಷಕ ವೃತ್ತಿ ನೊಬೆಲ್ ಕಾಸ್ ಇರುವ ಸ್ವಾಭಿಮಾನದ ಸಂಕೇತ, ಶಿಕ್ಷಕ ಎನ್ನುವುದೇ ಸ್ವಾಭಿಮಾನ. ಶಿಕ್ಷಕರ ಆ ಸ್ವಾಭಿಮಾನಕ್ಕೆ ಧಕ್ಕೆ ಆಗದಿರುವಂತೆ ಹಮ್ಮಿಕೊಂಡ ಯೋಜನೆ ಇದಾಗಿದೆ. ಅಂಥವರನ್ನು ಗುರುತಿಸಿ ರಾಜ್ಯಾದ್ಯಂತ ರೇಷನ್ ಹಾಗೂ ಮೆಡಿಕಲ್ ಕಿಟ್ ಕೊಟ್ಟಿದ್ದೇವೆ. ಅನಾರೋಗ್ಯ ಕಾರಣ ಹೋಂ ಐಸೋಲೇಷನ್ ಆದವರ ಕುಟುಂಬಕ್ಕೆ ಸಹ ಆಹಾರ ಕಿಟ್ ಮತ್ತು ಮೆಡಿಸಿನ್ ಕಿಟ್ ನೀಡಿರುತ್ತೇವೆ. ಈ ಯೋಜನೆಯ ಭಾಗವಾಗಿ ಇಂದು ಕೊಪ್ಪ ತಾಲೂಕಿನಲ್ಲಿ ಸುಮಾರು 50ಕ್ಕೂ ಅಧಿಕ ಸಂಖ್ಯೆಯಲ್ಲಿ ಆಹಾರ ಹಾಗೂ ಮೆಡಿಸಿನ್ ಕಿಟ್ ವಿತರಣೆ ಮಾಡಿರುತ್ತೇವೆ. ಹಾಗೂ ನಮ್ಮ ಜಿಲ್ಲೆಯ ಐದು ತಾಲೂಕು ಗಳಲ್ಲಿ ಯಾರು ಬೇಕಾದರೂ ಈ ಯೋಜನೆಯ ಸಹಾಯ ಪಡೆಯಬಹುದು ಎಂದಿದ್ದಾರೆ.

ಪಾರದರ್ಶಕ ಹಂಚಿಕೆಯ ಉದ್ಧೇಶದಿಂದ ತಮ್ಮ ಮುಖ್ಯ ಶಿಕ್ಷಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಂದ ರೆಫರ್ ಮಾಡಿಸುವುದು ಕಡ್ಡಾಯವಾಗಿರುತ್ತದೆ. ಆರ್ಥಿಕವಾಗಿ ತೊಂದರೆಗೆ ಸಿಲುಕಿದವರಿಗೆ ಪ್ರಾಮುಖ್ಯತೆ ನೀಡುವ ಉದ್ಧೇಶದಿಂದ ಈ ವ್ಯವಸ್ಥೆಯ ಮೂಲಕ ಹಂಚಿಕೆ ಮಾಡಲಾಗುತ್ತಿದೆ.

ಮೂಲತಃ ಕೊಪ್ಪ ತಾಲೂಕಿನ ಶಾನುವಳ್ಳಿಯ ತುಮಕಾನೆಯವರಾದ ಸುಧಾಕರ್ ಶೆಟ್ಟಿ ಅವರು ಪ್ರಸ್ತುತ ಉದ್ಯಮಿಯಾಗಿದ್ದು ಮೈಸೂರಿನಲ್ಲಿ ನೆಲೆಸಿರುತ್ತಾರೆ. ತಮ್ಮ ಎಜುಕೇಶನ್ ಟ್ರಸ್ಟ್ ಮೂಲಕ ಇದುವರೆಗೂ ಸುಮಾರು 1800ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾಭ್ಯಾಸ ನೀಡಿರುತ್ತಾರೆ.