ಶೃಂಗೇರಿ ತಾಲೂಕು ಆಸ್ಪತ್ರೆಯನ್ನು ಅಗತ್ಯಬಿದ್ದಲ್ಲಿ ಸಂಪೂರ್ಣ ಕೋವಿಡ್ ಆಸ್ಪತ್ರೆಯನ್ನಾಗಿ ಮಾಡುತ್ತೇವೆ, ಕೋವಿಡೇತರ ರೋಗಿಗಳಿಗೆ ಹತ್ತಿರದ ಶ್ರೀಮಠದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ಕುರಿತು ಮಾತುಕತೆ ನಡೆಸುತ್ತೇವೆ. ಈ ಕುರಿತು ಶ್ರೀಮಠದ ಆಡಳಿತಾಧಿಕಾರಿಗಳು ಹಾಗೂ ಸ್ವಾಮೀಜಿಗಳ ಬಳಿ ಮನವಿ ಮಾಡಿಕೊಳ್ಳುತ್ತೇವೆ. ಅಂತಹ ಸಂದರ್ಭದಲ್ಲಿ ಈಗಿರುವ ತಾಲೂಕು ಆಸ್ಪತ್ರೆಯನ್ನು ಸಂಪೂರ್ಣ ಕೋವಿಡ್ ಆಸ್ಪತ್ರೆಯನ್ನಾಗಿಸಿ ಕೋವಿಡೇತರ ರೋಗಿಗಳ ಸಾಮಾನ್ಯ ಹಾಗೂ ತುರ್ತು ಚಿಕಿತ್ಸೆಯನ್ನು ಪಕ್ಕದ ಖಾಸಗೀ ಆಸ್ಪತ್ರೆಯಲ್ಲಿ ನೀಡಲಾಗುವುದು.

ತಜ್ಞರ ಅಭಿಪ್ರಾಯದಂತೆ ಮುಂದೆ ಕೊರೋನಾ ಮೂರನೇ ಅಲೆ ಬರುವ ಸಾಧ್ಯತೆ ಇದೆ, ಅದು ಬಂದಲ್ಲಿ ಚಿಕ್ಕ ಮಕ್ಕಳಿಗೂ ಹೆಚ್ಚಿನ ಸಮಸ್ಯೆ ಆಗುವ ಸಾಧ್ಯತೆ ಇದೆ. ಆದಕಾರಣ ಅದಕ್ಕಾಗಿ ನಾವು ಈಗಲೇ ತಯಾರಿ ಮಾಡಿಕೊಂಡು ಮುಂದಿನ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವ ಕಾರ್ಯ ಮಾಡಬೇಕಿದೆ ಎಂದರು.

ಕೊಪ್ಪದಲ್ಲಿ ನೂರು ಬೆಡ್ ಕೋವಿಡ್ ಆಸ್ಪತ್ರೆಯನ್ನು ಮಾಡಿದ್ದೇವೆ, ನರಸಿಂಹ ರಾಜಪುರದಲ್ಲಿ ಐವತ್ತು ಬೆಡ್ ಕೋವಿಡ್ ಆಸ್ಪತ್ರೆಯನ್ನು ರೆಡಿ ಮಾಡಿದ್ದೇವೆ ಅಗತ್ಯ ಬಿದ್ದಲ್ಲಿ ಅಲ್ಲಿಯದನ್ನೂ ನೂರು ಬೆಡ್ ಆಸ್ಪತ್ರೆ ಯನ್ನಾಗಿಸಲು ಪೂರ್ವ ಸಿದ್ಧತೆ ಮಾಡಿಕೊಳ್ಳುತ್ತೇವೆ ಎಂದರು.

ಇನ್ನು ಶೃಂಗೇರಿಯಲ್ಲಿ ನೂರು ಬೆಡ್ ಆಸ್ಪತ್ರೆ ಪ್ರಕ್ರಿಯೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಶೃಂಗೇರಿಯಂತಹ ಪ್ರವಾಸಿ ತಾಣಕ್ಕೆ ನೂರು ಬೆಡ್ ನ ಸುಸಜ್ಜಿತ ಆಸ್ಪತ್ರೆಯ ಅಗತ್ಯತೆ ಖಂಡಿತಾ ಇದೆ. ಕಂದಾಯ ಇಲಾಖೆ ಹಾಗೂ ಗೋಮಾಳ ಭೂಮಿಯನ್ನು ಅರಣ್ಯ ಇಲಾಖೆಗೆ ವರ್ಗಾವಣೆ ಮಾಡಿರುವುದರಿಂದ ಹಾಗೂ 4(1) ನೋಟಿಫಿಕೇಶನ್ ನಿಂದ ಜಾಗದ ಕೊರತೆ ಉಂಟಾಗಿದ್ದು. ಸಧ್ಯ ಮೆಣಸೆಯ ಬಳಿ ಐದು ಎಕರೆ ಜಾಗವನ್ನು ಗುರುತಿಸಿದ್ದು, ಅದು ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯಲ್ಲಿದ್ದು ಅದರಿಂದ ಹೊರತರಲು ಕಡತವು ಮಂಜೂರಾತಿ ಪ್ರಕ್ರಿಯೆಗೆ ಜಿಲ್ಲಾಧಿಕಾರಿಗಳ ಬಳಿ ಇದೆ. ಜಾಗ ಮಂಜೂರಾದ ಕೂಡಲೇ ಸರ್ಕಾರದ ಮೊರೆ ಹೋಗಬೇಕಿದೆ ಎಂದರು.

ವೀಡಿಯೋ ವೀಕ್ಷಿಸಿ ; https://youtu.be/srO-NfKddnw