ಚಿಕ್ಕಮಗಳೂರು ಜಿಲ್ಲೆಯಲ್ಲಿ ನೆನ್ನೆ ಯಾವುದೇ ಸಾವು ಸಂಭವಿಸದೆ, ಒಟ್ಟು 206 ಮಾತ್ರ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದವು. ಸತತ ಎರಡು ದಿನಗಳಿಂದ ಕಡಿಮೆ ಪ್ರಕರಣಗಳು ಬೆಳಕಿಗೆ ಬಂದಿದ್ದರಿಂದ ಇನ್ನೇನು ಕಾಫಿನಾಡಲ್ಲಿ ವೈರಸ್ ಕಾಟ ಕಡಿಮೆ ಆಗುತ್ತಿದೆ ಎಂದು ಭಾವಿಸಲಾಗಿತ್ತು ಆದರೆ ಇಂದು ಜಿಲ್ಲೆಯಲ್ಲಿ ಸುಮಾರು 735 ಕೇಸ್ ಗಳು ಪತ್ತೆಯಾಗಿದ್ದು ಇಂದು ಒಂದೇ ದಿನ ಇಷ್ಟೊಂದು ಪ್ರಮಾಣದಲ್ಲಿ ಏರಿಕೆ ಕಂಡಿರುವುದು ಆತಂಕಕ್ಕೆ ಕಾರಣವಾಗಿದೆ.
ಇಂದು ಒಟ್ಟು 239 ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಹಾಗೆಯೇ ಇಂದು ಜಿಲ್ಲೆಯಲ್ಲಿ ಒಟ್ಟು 3 ಸಾವು ಸಂಭವಿಸಿದೆ
ತಾಲ್ಲೂಕುವಾರು ನೋಡಿದಾಗ
- ಚಿಕ್ಕಮಗಳೂರು 197
- ಶೃಂಗೇರಿ 69
- ಮೂಡಿಗೆರೆ 81
www.newsmalnad.com
- ಕೊಪ್ಪ 62
- ಎನ್ ಆರ್ ಪುರ 28
- ತರೀಕೆರೆ 222
- ಕಡೂರು 76
ಹೀಗೆ ಒಟ್ಟು 735 ಪ್ರಕರಣಗಳು ದಾಖಲಾಗಿವೆ.
ಸಾರ್ವಜನಿಕರು ಮಾಸ್ಕ್ ಧರಿಸಿ, ಅಂತರ ಕಾಪಾಡಿಕೊಂಡು ಸರ್ಕಾರದ ನಿಯಮ ಪಾಲಿಸುವ ಮೂಲಕ ಕೊರೋನಾ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಬೇಕಿದೆ.
18ವರ್ಷ ಮೇಲ್ಪಟ್ಟವರು www.cowin.gov.in ಹಾಗೂ ಆರೋಗ್ಯ ಸೇತು, ಉಮಂಗ್ ಆಪ್ ನ ಮೂಲಕ ರಿಜಿಸ್ಟರ್ ಮಾಡಿಕೊಂಡು ಮುಂದೆ ವ್ಯಾಕ್ಸಿನ್ ತೆಗೆದುಕೊಳ್ಳೀ. ಅದಕ್ಕೂ ಮೊದಲು ರಕ್ತದಾನ ಮಾಡುವುದನ್ನು ಮರೆಯಬೇಡಿ.ಭಯ ಬೇಡ ಎಚ್ಚರಿಕೆ ಇರಲಿ


0 Comments