ಮದುವೆ ಸಮಾರಂಭಕ್ಕೆ ಎಂದು ಹತ್ತು ಜನರಿಗೆ ಅನುಮತಿ ಪಡೆದು ಕೋವಿಡ್ ನಿಯಮ ಉಲ್ಲಂಘಿಸಿ ನೂರಾರು ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಮದುವೆ ಸಮಾರಂಭ ಮಾಡುತ್ತಿದ್ದ ಸ್ಥಳದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕರಿಕಲ್ಲಳ್ಳಿ ಗ್ರಾಮದಲ್ಲಿ ಮದುವೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹೆಚ್ಚು ಜನ ಸೇರಿರುವ ಮಾಹಿತಿ ಮೇರೆಗೆ ಜೋಡಿಹೋಚಿಹಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುತ್ತಿದ್ದಂತೆಯೇ ಭೋಜನವನ್ನೂ ಬಿಟ್ಟು ಜನರು ಸ್ಥಳದಿಂದ ಕಾಲ್ಕಿತ್ತರು, ವಧುವನ್ನು ವೇದಿಕೆ ಮೇಲೆಯೇ ಬಿಟ್ಟು ವರನ ಕಡೆಯವರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.


0 Comments