ಚಿಕ್ಕಮಗಳೂರು ಜಿಲ್ಲೆಯಲ್ಲಿ ನೆನ್ನೆ 3 ಸಾವು ಸಂಭವಿಸಿ ಒಟ್ಟು 835 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದವು. ಇಂದು ಜಿಲ್ಲೆಯಲ್ಲಿ ಸುಮಾರು 1093 ಪಾಸಿಟಿವ್ ಕೇಸ್ ಗಳು ಪತ್ತೆಯಾಗಿದೆ. ಈ ಮೂಲಕ ಕಾಫಿನಾಡಿನಲ್ಲಿ ಮತ್ತೆ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಆದರೆ ಗುಣಮುಖರಾಗಿ ಆಸ್ಪತ್ರೆಯಿಂದ ತೆರಳುತ್ತಿರುವವರ ಸಂಖ್ಯೆಯೂ ಹೆಚ್ಚಾಗಿಯೇ ಇವೆ.

  1. ಜಿಲ್ಲೆಯಲ್ಲಿ ಒಟ್ಟು ಸಕ್ರಿಯ ಪ್ರಕರಣಗಳು - 5571
  2. ಇಂದು ಒಟ್ಟು ಗುಣಮುಖರಾದವರು - 457

ತಾಲ್ಲೂಕುವಾರು ನೋಡಿದಾಗ 

  • ಚಿಕ್ಕಮಗಳೂರು 385
  • ಶೃಂಗೇರಿ 27
  • ಮೂಡಿಗೆರೆ 127
  • ಕೊಪ್ಪ 29

 www.newsmalnad.com 

  • ಎನ್ ಆರ್ ಪುರ 90
  • ತರೀಕೆರೆ 209
  • ಕಡೂರು 226

ಹೀಗೆ ಒಟ್ಟು 1093 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ.

ಸಾರ್ವಜನಿಕರು ಮಾಸ್ಕ್ ಧರಿಸಿ, ಅಂತರ ಕಾಪಾಡಿಕೊಂಡು ಸರ್ಕಾರದ ನಿಯಮ ಪಾಲಿಸುವ ಮೂಲಕ ಕೊರೋನಾ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಬೇಕಿದೆ. 18ವರ್ಷ ಮೇಲ್ಪಟ್ಟವರು www.cowin.gov.in ಹಾಗೂ ಆರೋಗ್ಯ ಸೇತು, ಉಮಂಗ್ ಆಪ್ ನ ಮೂಲಕ ರಿಜಿಸ್ಟರ್ ಮಾಡಿಕೊಂಡು ಮುಂದೆ ವ್ಯಾಕ್ಸಿನ್ ತೆಗೆದುಕೊಳ್ಳೀ. ಅದಕ್ಕೂ ಮೊದಲು ರಕ್ತದಾನ ಮಾಡುವುದನ್ನು ಮರೆಯಬೇಡಿ. ಭಯ ಬೇಡ ಎಚ್ಚರಿಕೆ ಇರಲಿ