ಚಿಕ್ಕಮಗಳೂರು ಜಿಲ್ಲಾಡಳಿತದಿಂದ ಲಾಕ್ಡೌನ್ ಪರಿಷ್ಕರಣೆ ಮಾಡಿದ್ದು ನೂತನ ನಿಯಮಾವಳಿಗಳನ್ನು ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ.
ನೂತನ ಲಾಕ್ಡೌನ್ ಮಾರ್ಗಸೂಚಿ ಪ್ರಕಾರ.
- ಬೆಳಿಗ್ಗೆ 6ರಿಂದ 10ರವರೆಗೆ ದಿನಸಿ ಅಂಗಡಿ, ಮೀನು ಮಾಂಸ ಮಾರಾಟಕ್ಕೆ ಅವಕಾಶ ನೀಡಲಾಗಿದೆ.
- ಕಳೆದ 10ಕ್ಕೂ ಹೆಚ್ಚು ದಿನಗಳಿಂದ ಬಂದ್ ಆಗಿದ್ದ ಮದ್ಯದಂಗಡಿಗಳಿಗೆ ಅನುಮತಿ ನೀಡಿದ್ದು ಮದ್ಯ ಪಾರ್ಸೆಲ್ ತೆಗೆದುಕೊಂಡು ಹೋಗಲು ಅವಕಾಶ ನೀಡಲಾಗಿದೆ.
- ಬೆಳಗ್ಗೆ 6 ಗಂಟೆಯಿಂದ ಹತ್ತು ಗಂಟೆಯವರೆಗೂ ವ್ಯಾಪಾರಕ್ಕೆ ಅವಕಾಶ.
- ಕೃಷಿ ಚಟುವಟಿಕೆ ನಡೆಸಲು ಅನುಮತಿ ನೀಡಲಾಗಿದ್ದು, ಸ್ಥಳೀಯ ಕಾರ್ಮಿಕರನ್ನು ಬಳಸಿಕೊಂಡು ಚಟುವಟಿಕೆ ನಡೆಸುವಂತೆ ಆದೇಶಿಸಲಾಗಿದೆ.
- ತಳ್ಳುವ ಗಾಡಿಯಲ್ಲಿ ಬೆಳಿಗ್ಗೆ 6ರಿಂದ ರಿಂದ ಸಂಜೆ 6ರವರೆಗೆ ಹಣ್ಣು-ತರಕಾರಿಗಳನ್ನ ಮಾರಾಟ ಮಾಡಲು ಅವಕಾಶ
- ರಸಗೊಬ್ಬರ, ಬಿತ್ತನೆ ಬೀಜ ಮಾರಾಟಕ್ಕೆ ಬೆಳಿಗ್ಗೆ 6 ರಿಂದ 10ರವರೆಗೆ ಅವಕಾಶ
- ವಾಹನಗಳ ಮೂಲಕ ಯಾವುದೇ ಕಾರ್ಮಿಕರು/ಸಾರ್ವಜನಿಕರನ್ನು ಕರೆದುಕೊಂಡು ಹೋಗುವುದನ್ನು ನಿಷೇದಿಸಲಾಗಿದೆ.
- ತುರ್ತು ಸೇವೆಗಳಿಗೆ ಸಂಬಂಧಿಸಿದ ಇಲಾಖೆಗಳನ್ನು ಹೊರತುಪಡಿಸಿ ಸರ್ಕಾರಿ/ಅರೆ ಸರ್ಕಾರಿ/ಖಾಸಗೀ ಕಛೇರಿ ಸಿಬ್ಬಂದಿಗಳು ಮನೆಯಿಂದಲೇ ಕಾರ್ಯ ನಿರ್ವಹಿಸತಕ್ಕದ್ದು.
- ಹೊರ ಜಿಲ್ಲೆಯಿಂದ ಆಗಮಿಸುವವರಿಗೆ ಕಡ್ಡಾಯ 14ದಿನಗಳ ಹೊಂ ಕ್ವಾರಂಟೈನ್
- ಹಾಪ್ ಕಾಮ್ಸ್ ಗಳಿಗೆ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ವಾಹನಗಳ ಮೂಲಕ ನಗರ/ಗ್ರಾಮೀಣ ಪ್ರದೇಶಗಳಲ್ಲಿ ಮಾರಾಟಕ್ಕೆ ಅವಕಾಶ.
- ಇನ್ಶೂರೆನ್ಸ್ ಕಂಪನಿ, ಬ್ಯಾಂಕ್, ಪೋಸ್ಟ್ ಆಫೀಸ್ ಗಳಿಗೆ ಮದ್ಯಾಹ್ನ 1ರವರೆಗೆ ಅವಕಾಶ
- ಈಗಾಗಲೇ ಅನುಮತಿ ಪಡೆದ ಮದುವೆ ಸಮಾರಂಭಕ್ಕೆ 10ಜನರಿಗೆ ಅವಕಾಶ.
ಉಳಿದಂತೆ 07 ಜೂನ್ 2021 ಬೆಳಿಗ್ಗೆ 6ರವರೆ ರವರೆ ಯಾವುದೇ ಮದುವೆ, ಮುಂಜಿ, ಗೃಹಪ್ರವೇಶ ಹಾಗೂ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮ ಸಭೆಗಳಿಗೆ ಅವಕಾಶವಿಲ್ಲ. ಈ ನೂತನ ಆದೇಶವು ನಾಳೆ ಬೆಳಿಗ್ಗೆ 6ರಿಂದ ಜೂನ್ 7ರ ಬೆಳಿಗ್ಗೆ 6ಗಂಟೆಯ ವರೆಗೆ ಅನ್ವಯವಾಗಲಿದೆ


0 Comments