ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿಯ ಚೆನ್ನಡಲು ಗ್ರಾಮದಲ್ಲಿ ಮಗನಿಂದಲೇ ತಂದೆಯ ಹತ್ಯೆ ಆದ ಘಟನೆ ನಡೆದಿದೆ. ಪಾಶ್ವವಾಯು ಪೀಡಿತ ಸುಂದರ ಪೂಜಾರಿ ಎಂಬುವವರು ನಿಧನರಾದ ವ್ಯಕ್ತಿ.

ಆರೋಪಿ ನಿತೇಶ್(28) ಎರಡು ದಿನಗಳ ಹಿಂದೆ ಕೊಡಲಿಯಿಂದ ತಂದೆ ತಲೆಗೆ ಹೊಡೆದ ಪರಿಣಾಮ ತೀವ್ರ ಹಲ್ಲೆಗೆ ಒಳಗಾಗಿದ್ದ ಸುಂದರ ಪೂಜಾರಿ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ.

ಎರಡು ಅಂಗವಿಕಲ ಮಕ್ಕಳಿಗೆ ದಾನಿಗಳಿಂದ ಬಂದ ಕೂಡಿಟ್ಟ ಹಣಕ್ಕಾಗಿ ಆರೋಪಿ ಪೀಡಿಸುತ್ತಿದ್ದ ಎಂದು ತಿಳಿದುಬಂದಿದೆ. ಈ ಕುರಿತು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.