ಚಿಕ್ಕಮಗಳೂರು ಜಿಲ್ಲೆಯಲ್ಲಿ ನೆನ್ನೆ ಒಟ್ಟು 671 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದವು. ಇಂದು ಜಿಲ್ಲೆಯಲ್ಲಿ ಸುಮಾರು 340 ಪಾಸಿಟಿವ್ ಕೇಸ್ ಗಳು ಪತ್ತೆಯಾಗಿದೆ. ಜಿಲ್ಲೆ ಕಠಿಣ ಲಾಕ್ಡೌನ್ ಜಾರಿ ಮಾಡಿದ್ದು ಯಾವುದೇ ಚಟುವಟಿಕೆ ಇಲ್ಲದೇ ಜನರು ಹೈರಾಣಾಗಿದ್ದರೂ ಜಿಲ್ಲೆಯಲ್ಲಿ ಪಾಸಿಟಿವ್ ಕೇಸ್ ಗಳ ಸಂಖ್ಯೆ ಮಿತಿ ಮೀರಿ ಹೆಚ್ಚುತ್ತಿದೆ. ಇಲ್ಲಿಯತನಕ ಚಿಕ್ಕಮಗಳೂರು ಜಿಲ್ಲೆ ಸಂಪೂರ್ಣ ಲಾಕ್ ಡೌನ್ ಮಾಡಲಾಗಿತ್ತು ಆದರೆ ಇದರಿಂದ ಸೋಂಕಿತರ ಸಂಖ್ಯೆಯಲ್ಲಿ ಯಾವ ವ್ಯತ್ಯಾಸವು ಕಂಡುಬಂದಿಲ್ಲ. ನಾಳೆ ಬೆಳಿಗ್ಗೆ 6 ರಿಂದ ಜಿಲ್ಲಾಡಳಿತ ಹೊಸ ಮಾರ್ಗಸೂಚಿ ಪ್ರಕಟಿಸಿದ್ದು ಸ್ವಲ್ಪ ಮಟ್ಟಿಗೆ ಸಡಿಲ ಮಾಡಲಾಗಿದೆ‌.

ಇದನ್ನೂ ಓದಿ : ಚಿಕ್ಕಮಗಳೂರು ಲಾಕ್ಡೌನ್ ಸ್ವಲ್ಪ ಸಡಿಲ, ಏನೇನು ಬದಲಾವಣೆ ಇಲ್ಲಿದೆ ಡೀಟೇಲ್ಸ್ 

ಕಾಫಿನಾಡಿನ ಇಂದಿನ ಕಂಪ್ಲೀಟ್ ಕೊರೋನಾ ರಿಪೋರ್ಟ್ ಇಲ್ಲಿದೆ

  1. ಇಂದು ಸೋಂಕಿನಿಂದ ಗುಣಮುಖರಾದವರ ಸಂಖ್ಯೆ: 645
  2. ಜಿಲ್ಲೆಯಲ್ಲಿ ಸಾವನ್ನಪ್ಪಿರುವವರು: 4
  3. ಜಿಲ್ಲೆಯಲ್ಲಿ ಒಟ್ಟು ಸಕ್ರಿಯ ಪ್ರಕರಣಗಳು: 5703

ತಾಲ್ಲೂಕುವಾರು ನೋಡಿದಾಗ 

  • ಚಿಕ್ಕಮಗಳೂರು 77
  • ಶೃಂಗೇರಿ 16
  • ಮೂಡಿಗೆರೆ 11
  • ಕೊಪ್ಪ 29

 www.newsmalnad.com 

  • ಎನ್ ಆರ್ ಪುರ 50
  • ತರೀಕೆರೆ 55
  • ಕಡೂರು 102

ಹೀಗೆ ಒಟ್ಟು 340 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ.

ಸಾರ್ವಜನಿಕರು ಮಾಸ್ಕ್ ಧರಿಸಿ, ಅಂತರ ಕಾಪಾಡಿಕೊಂಡು ಸರ್ಕಾರದ ನಿಯಮ ಪಾಲಿಸುವ ಮೂಲಕ ಕೊರೋನಾ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಬೇಕಿದೆ. 

ಭಯ ಬೇಡ ಎಚ್ಚರಿಕೆ ಇರಲಿ